ಪೊಲೀಸರ ಎನ್‌ಕೌಂಟರ್‌ಗೆ 7 ಮಂದಿ ಮಾವೋವಾದಿಗಳು ಬಲಿ

ಗಡ್ಚಿರೋಲಿ/ಮಹರಾಷ್ಟ್ರ: ಇಲ್ಲಿನ ಕಲ್ಲೇಡ್ ಗ್ರಾಮದ ಜಿಂಗಾನೂರ್ ಅರಣ್ಯದಲ್ಲಿ ಪೊಲೀಸರು ಮಾವೋವಾದಿಗಳ ಮೇಲೆ ನಡೆಸಿದ ಎನ್‌ಕೌಂಟರ್‌ನಲ್ಲಿ ಐದು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.
ಸಿ–60 ಪಡೆ( ಮಹಾರಾಷ್ಟ್ರದ ವಿಶೇಷ ಮಾವೋವಾದಿ ನಿಗ್ರಹ ಪೊಲೀಸ್ ಪಡೆ) ನಿಗ್ರಹ ಪಡೆ ಚತ್ತೀಸ್‌ಗಡದ ಗಡಿಭಾಗ ಸಮೀಪದ ಅರಣ್ಯದಲ್ಲಿ ಮಾವೋವಾದಿ ನಿಗ್ರಹ ಕಾರ್ಯಚರಣೆ ಕೈಗೊಂಡಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ದಾಳಿ ವೇಳೆ 7 ಮಂದಿ ಮೃತಪಟ್ಟಿದ್ದು, ಇವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಸುತ್ತಮುತ್ತಲ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.