5
ಸಿದ್ದರಾಮಯ್ಯ, ಪರಮೇಶ್ವರ, ದಿನೇಶ್‌ ಏಕಕಾಲಕ್ಕೆ ಪ್ರಚಾರ ಆರಂಭ

ಕಾಂಗ್ರೆಸ್‌ ಪ್ರಚಾರಕ್ಕೆ ವೇಣುಗೋಪಾಲ್ ಸೂತ್ರ

Published:
Updated:
ಕಾಂಗ್ರೆಸ್‌ ಪ್ರಚಾರಕ್ಕೆ ವೇಣುಗೋಪಾಲ್ ಸೂತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಮತ್ತು ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಏಕಕಾಲದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿರುವ ಕೆ.ಸಿ.ವೇಣುಗೋಪಾಲ್‌ ಹೊಸ ಸೂತ್ರ ಸೂಚಿಸಿದ್ದಾರೆ.

ಕಾಂಗ್ರೆಸ್‌ ಶಾಸಕರಿರುವ 121 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ವಿರೋಧ ಪಕ್ಷಗಳ ಶಾಸಕರಿರುವ 103 ವಿಧಾನಸಭಾ ಕ್ಷೇತ್ರಗಳಲ್ಲಿ ಪರಮೇಶ್ವರ ಮತ್ತು ದಿನೇಶ್‌ ಗುಂಡೂರಾವ್‌ ಅವರಿಗೆ ಪ್ರಚಾರದ ಉಸ್ತುವಾರಿ ನೀಡಲಾಗುವುದು.

ನಿರ್ಮಾಪಕ ಮಂಜು ಟಿಕೆಟ್ ಆಕಾಂಕ್ಷಿ: ತುರುವೇಕೆರೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಚಲನಚಿತ್ರ ನಿರ್ಮಾಪಕ ಕೆ.ಮಂಜು ಕಾಂಗ್ರೆಸ್‌ ಮುಖಂಡರ ಜತೆ ಚರ್ಚಿಸಲು ಬುಧವಾರ ಕೆಪಿಸಿಸಿ ಕಚೇರಿಗೆ ಬಂದಿದ್ದರು. ಟಿಕೆಟ್‌ ದೊರೆಯುವ ಭರವಸೆ ಸಿಕ್ಕಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಭೆಗೆ ಅಂಬರೀಷ್‌ ಗೈರು: ಮಂಡ್ಯ ಜಿಲ್ಲೆ ಕಾಂಗ್ರೆಸ್‌ ಸಭೆಗೆ ಹಾಜರಾಗುವಂತೆ ಶಾಸಕ ಅಂಬರೀಷ್‌ ಅವರಿಗೆ ಹೇಳಿ ಕಳುಹಿಸಿದ್ದರೂ ಬರಲಿಲ್ಲ, ವೇಣುಗೋಪಾಲ್‌ ಮಾತಿಗೂ ಬೆಲೆ ನೀಡಿಲ್ಲ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಮಂಡ್ಯದಲ್ಲಿ ನಟಿ ರಮ್ಯಾಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಅಂಬರೀಷ್‌ ಸಭೆಗೆ ಬರಲಿಲ್ಲ ಎನ್ನಲಾಗಿದೆ.

ಪಕ್ಷ ಬಿಡ್ತೀರಾ– ಮಧ್ವರಾಜ್‌ಗೆ ಪ್ರಶ್ನೆ: ‘ನೀವು ಕಾಂಗ್ರೆಸ್‌ ಬಿಟ್ಟು, ಬಿಜೆಪಿ ಸೇರುತ್ತೀರಾ ಎಂಬ ಮಾಹಿತಿ ಇದೆ. ಇದು ನಿಜವೇ’ ಎಂದು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ವೇಣುಗೋಪಾಲ್‌ ಪ್ರಶ್ನಿಸಿದರು.

‘ಇದು ಕೆಲವರು ಉದ್ದೇಶಪೂರ್ವಕವಾಗಿ ಹುಟ್ಟು ಹಾಕಿರುವ ವದಂತಿ. ಇದರಲ್ಲಿ ಹುರುಳಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ಮಧ್ವರಾಜ್ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ಪಕ್ಷದೊಳಗಿದ್ದು, ಇತರ ಪಕ್ಷಗಳ ಜತೆ ಕೈಜೋಡಿಸುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಕರಾವಳಿ ಭಾಗದಲ್ಲಿ ಇದು ಹೆಚ್ಚಾಗಿದೆ ಎಂದು ಗೊತ್ತಾಗಿದೆ. ತಪ್ಪು ತಿದ್ದಿಕೊಳ್ಳದಿದ್ದರೆ, ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ’ ಎಂದು ಎಚ್ಚರಿಕೆ ನೀಡಿದರು.

ಕರಾವಳಿಯಲ್ಲಿ ಪಕ್ಷ ದುರ್ಬಲ: ‘ಕರಾವಳಿಯಲ್ಲಿ ಪಕ್ಷ ದುರ್ಬಲವಾಗಿದೆ. ಎಲ್ಲ ಶಾಸಕರೂ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು’ ಎಂದು ವೇಣುಗೋಪಾಲ್‌ ಎಚ್ಚರಿಕೆ ನೀಡಿದರು.

‘ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಗಲಭೆ ಸೃಷ್ಟಿಸಲೂಬಹುದು. ಕಳೆದ ಬಾರಿ ಕರಾವಳಿಯಲ್ಲಿ ಒಂದು ಸ್ಥಾನ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಅದೇ ಫಲಿತಾಂಶ ಪುನರಾವರ್ತನೆಗೊಳ್ಳಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ರಾಹುಲ್‌ ಅಭಿನಂದನೆಗೆ ಸಮಾವೇಶ: ಕೆಪಿಸಿಸಿ ನಿರ್ಧಾರ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಲಿರುವ ರಾಹುಲ್‌ ಗಾಂಧಿ ಅವರನ್ನು ಅಭಿನಂದಿಸುವ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ಕೆಪಿಸಿಸಿ ನಿರ್ಧರಿಸಿದೆ.

ಈ ಸಮಾವೇಶ ಇದೇ 19ರ ಬಳಿಕ ಬೆಂಗಳೂರಿನಲ್ಲಿ ನಡೆಯಲಿದೆ. ಆ ವೇಳೆಗೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶವೂ ಪ್ರಕಟ

ವಾಗಲಿದ್ದು, ಗುಜರಾತ್‌ನಲ್ಲಿ ಕಾಂಗ್ರೆಸ್‌ ಗೆದ್ದರೆ ‘ವಿಜಯೋತ್ಸವ ಸಮಾವೇಶ’ ಆಚರಿಸುವ ಮೂಲಕ ರಾಜ್ಯದಲ್ಲಿ ಅಬ್ಬರದ ಚುನಾವಣಾ ಪ್ರಚಾ

ರಕ್ಕೆ ನಾಂದಿ ಹಾಡಲು ಕೆಪಿಸಿಸಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

‘ಬಹಳಷ್ಟು ಶಾಸಕರು ಮನೆ– ಮನೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸದೇ ನಿಷ್ಕ್ರಿಯರಾಗಿದ್ದಾರೆ. ಅಂತಹವರ ಮಾಹಿತಿ ಇದೆ. ಯಾವ ಕಾರಣಕ್ಕೆ ಪಕ್ಷದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ’ ಎಂದು ವೇಣುಗೋಪಾಲ್‌ ಬುಧವಾರ ಎಂಟು ಜಿಲ್ಲೆಗಳ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಪ್ರಶ್ನಿಸಿದರು. ಪ್ರತಿಯೊಬ್ಬ ಶಾಸಕರ ಮಾಹಿತಿ ಇಟ್ಟುಕೊಂಡೇ ಉಸ್ತುವಾರಿ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.

‘ನಿಷ್ಕ್ರಿಯರಾಗಿರುವವರು ತಪ್ಪು ತಿದ್ದಿಕೊಂಡು ಇನ್ನು ಮುಂದೆ ಸಕ್ರಿಯರಾಗಬೇಕು. ಇಲ್ಲವಾದರೆ ಟಿಕೆಟ್‌ ಕೊಡುವುದಿಲ್ಲ. ಈಗಿರುವ ಎಲ್ಲ ಶಾಸಕರಿಗೂ ಟಿಕೆಟ್‌ ಸಿಕ್ಕೇ ಬಿಡುತ್ತದೆ ಎಂಬ ಭಾವನೆ ಬೇಡ. ಟಿಕೆಟ್‌ ಅಂತಿಮಗೊಳಿಸುವುದಕ್ಕೆ ಮುನ್ನ ಕ್ಷೇತ್ರದ ಜನರ ಅಭಿಪ್ರಾಯ ಪಡೆಯಲಾಗುವುದು. ಕಠಿಣ ಪರಿಶ್ರಮ ವಹಿಸುವವರಿಗೇ ಟಿಕೆಟ್‌ ನೀಡಲಾಗುತ್ತದೆ’ ಎಂದು ವೇಣುಗೋಪಾಲ್‌ ಖಡಾಖಂಡಿತವಾಗಿ ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಎಲ್ಲ ಕಡೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಭಟನೆಗಳು ತೋರಿಕೆ ಉದ್ದೇಶದ್ದಾಗಿರಬಾರದು ಎಂದೂ ಹೇಳಿದರು.

ಸಭೆಯಲ್ಲಿ ಸಚಿವರಾದ ತನ್ವೀರ್ ಸೇಠ್, ಎಂ.ಸಿ.ಮೋಹನ್‌ ಕುಮಾರಿ, ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್, ಪ್ರೊ. ಬಿ.ಕೆ. ಚಂದ್ರಶೇಖರ್, ಸಂಸದ ಧ್ರುವನಾರಾಯಣ, ರೆಹಮಾನ್ ಖಾನ್, ಶಾಸಕರಾದ ನರೇಂದ್ರಸ್ವಾಮಿ, ವಿನಯಕುಮಾರ್ ಸೊರಕೆ ಇದ್ದರು.

ಪ್ರಬುದ್ಧತೆ ಪ್ರದರ್ಶಿಸಬೇಕು: ಕಾಗೋಡು

ಉನ್ನತ ಸ್ಥಾನದಲ್ಲಿರುವವರು ಪ್ರಬುದ್ಧತೆ ಪ್ರದರ್ಶಿಸಬೇಕು. ಇಲ್ಲದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಪಾದಿಸಿದರು.

’ಮುಖ್ಯಮಂತ್ರಿ ಸಿದ್ದರಾಯಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಪ್ರತ್ಯೇಕವಾಗಿ ಯಾತ್ರೆ ಹೋಗುತ್ತಿದ್ದಾರೆ. ಏನಾದರೂ ಪಕ್ಷದೊಳಗೆ ಭಿನ್ನಾಭಿಪ್ರಾಯ ಇದೆಯೇ’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.

‘ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಂದಾಗಿದ್ದೇವೆ. ಪಕ್ಷ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ನೇತೃತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುವುದು ಸಹಜ. ಪಕ್ಷದ ನಾಯಕ ಸ್ಥಾನದಲ್ಲಿರುವವರು ಪ್ರಬುದ್ಧ ನಡವಳಿಕೆ ತೋರಬೇಕು. ಇಲ್ಲದಿದ್ದರೆ ಪಕ್ಷದ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ಪಕ್ಷ ಬಿಡ್ತೀರಾ– ಮಧ್ವರಾಜ್‌ಗೆ ಪ್ರಶ್ನೆ

‘ನೀವು ಕಾಂಗ್ರೆಸ್‌ ಬಿಟ್ಟು, ಬಿಜೆಪಿ ಸೇರುತ್ತೀರಾ ಎಂಬ ಮಾಹಿತಿ ಇದೆ. ಇದು ನಿಜವೇ’ ಎಂದು ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ವೇಣುಗೋಪಾಲ್‌ ಪ್ರಶ್ನಿಸಿದರು.

‘ಪಕ್ಷದಿಂದ ನೀವು ಶಾಸಕರಾಗಿದ್ದೀರಿ. ನಿಮಗೆ ಮಂತ್ರಿ ಸ್ಥಾನವೂ ಸಿಕ್ಕಿದೆ. ಇಷ್ಟೆಲ್ಲಾ ಅವಕಾಶಗಳು ಸಿಕ್ಕ ಮೇಲೂ ಇಂಥ ಸುದ್ದಿಗಳು ಏಕೆ ಕೇಳಿ ಬರುತ್ತಿವೆ’ ಎಂದು ಅವರು ಕೇಳಿದರು. ‘ಇದು ಕೆಲವರು ಉದ್ದೇಶಪೂರ್ವಕವಾಗಿ ಹುಟ್ಟು ಹಾಕಿರುವ ವದಂತಿ. ಇದರಲ್ಲಿ ಹುರುಳಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಬಿಡುವುದಿಲ್ಲ’ ಎಂದು ಪ್ರಮೋದ್‌ ಮಧ್ವರಾಜ್ ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ಪಕ್ಷದೊಳಗಿದ್ದು, ಇತರ ಪಕ್ಷಗಳ ಜತೆ ಕೈಜೋಡಿಸುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನನ್ನ ಬಳಿ ಮಾಹಿತಿ ಇದೆ. ಕರಾವಳಿ ಭಾಗದಲ್ಲಿ ಇದು ಹೆಚ್ಚಾಗಿದೆ ಎಂದು ಗೊತ್ತಾಗಿದೆ. ತಪ್ಪು ತಿದ್ದಿಕೊಳ್ಳದಿದ್ದರೆ, ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ’ ಎಂದು ಎಚ್ಚರಿಕೆ ನೀಡಿದರು.

ಕರಾವಳಿಯಲ್ಲಿ ಪಕ್ಷ ದುರ್ಬಲ:

‘ಕರಾವಳಿಯಲ್ಲಿ ಪಕ್ಷ ದುರ್ಬಲವಾಗಿದೆ. ಸಾಕಷ್ಟು ಶಾಸಕರು ಸೋಲುವ ಸಾಧ್ಯತೆ ಇದೆ. ಇನ್ನೂ ಐದು ತಿಂಗಳ ಕಾಲಾವಕಾಶ ಇದೆ. ಎಲ್ಲ ಶಾಸಕರೂ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು’ ಎಂದು ವೇಣುಗೋಪಾಲ್‌ ಎಚ್ಚರಿಕೆ ನೀಡಿದರು.

‘ಬಿಜೆಪಿಯವರು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಗಲಭೆ ಸೃಷ್ಟಿಸಲೂಬಹುದು. ಕಳೆದ ಬಾರಿ ಕರಾವಳಿಯಲ್ಲಿ ಒಂದು ಸ್ಥಾನ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಅದೇ ಫಲಿತಾಂಶ ಪುನರಾವರ್ತನೆಗೊಳ್ಳಬೇಕು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry