ಗುರುವಾರ , ಫೆಬ್ರವರಿ 25, 2021
17 °C

ಜೆರುಸಲೆಂ ಇಸ್ರೇಲ್‌ ರಾಜಧಾನಿ: ಟ್ರಂಪ್ ಮಾನ್ಯತೆ?

ಪಿಟಿಐ Updated:

ಅಕ್ಷರ ಗಾತ್ರ : | |

ಜೆರುಸಲೆಂ ಇಸ್ರೇಲ್‌ ರಾಜಧಾನಿ: ಟ್ರಂಪ್ ಮಾನ್ಯತೆ?

ವಾಷಿಂಗ್ಟನ್: ಜೆರುಸಲೆಂ ಅನ್ನು ಇಸ್ರೇಲ್‌ನ ರಾಜಧಾನಿಯನ್ನಾಗಿ ಮಾನ್ಯ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.ಈ ನಡೆ ಮಧ್ಯ ಪ್ರಾಚ್ಯದಲ್ಲಿ ಭಾರೀ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಭವವಿದೆ ಎಂದು ಅರಬ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ನ ರಾಜಧಾನಿಯನ್ನಾಗಿ ಜೆರುಸಲೆಂ ಅನ್ನು ಮಾನ್ಯ ಮಾಡಲಿದ್ದು, ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್‍ಅವಿವ್‍ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ಟ್ರಂಪ್‌ ಅವರು ವಿದೇಶಾಂಗ ಇಲಾಖೆಗೆ ಸೂಚನೆ ನೀಡಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಟ್ರಂಪ್ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಪ್ರಾಚೀನ ಕಾಲದಿಂದಲೂ ಜೆರುಸಲೆಂ ಯಹೂದಿಯರ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್‍ಅವಿವ್ ಬದಲು ಜೆರುಸಲೆಂ ಅನ್ನೇ ಇಸ್ರೇಲ್‌ನ ರಾಜಧಾನಿಯಾಗಿ ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್‍ ಅವರ ಈ ನಡೆಯಿಂದ ಇಸ್ರೇಲ್‌ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಇಸ್ರೇಲ್‌ನಲ್ಲಿರುವ ಮುಸ್ಲಿಮರು, ಯಹೂದಿಗಳು ಮತ್ತು ಕ್ರೈಸ್ತರ ನಡುವೆ ಭಿನ್ನಾಭಿಪ್ರಾಯಗಳಿಗೂ ಕಾರಣವಾಗಬಹುದು ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.