ಗುರುವಾರ , ಫೆಬ್ರವರಿ 25, 2021
30 °C

‘ಚಮಕ್’ಗೆ ಶುಭ ಹಾರೈಸಿದ ವಿಜಯ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಮಕ್’ಗೆ ಶುಭ ಹಾರೈಸಿದ ವಿಜಯ್‌

ನಿರ್ದೇಶಕ ಸಿಂಪಲ್ ಸುನಿ ಅವರು ಈಗ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅವರ ಜೊತೆಗೂಡಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ‘ಚಮಕ್’ ಕೊಡಲಿದ್ದಾರೆ! ಇದರ ಪೂರ್ವಭಾವಿಯಾಗಿ ಅವರು ತಮ್ಮ ‘ಚಮಕ್’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸುನಿ ಅವರು ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು ‘ಚಮಕ್’ ಎಂದಿದ್ದರೂ, ‘ಜೀವನದಲ್ಲಿ ಯಾರಿಗೂ ಚಮಕ್ ಮಾಡಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ! ‘ಗಣೇಶ್‍ ಅವರಿಗೆ ಸಿನಿಮಾದ ಕಥೆ ಹೇಳಿದೆ. ಸಿನಿಮಾದಲ್ಲಿ ಚಮಕ್ ಅನಿಸುವ ತಿರುವುಗಳು ಇರುವ ಕಾರಣ, ಸಿನಿಮಾದ ಶೀರ್ಷಿಕೆಯನ್ನೂ ಇದೇ ಇಡಬಹುದು ಎಂಬ ಸಲಹೆ ನೀಡಿದರು’ ಎಂದು ಹೇಳಿದರು ಸುನಿ.

ಕಿರಿಕ್ ಪಾರ್ಟಿ ಸಿನಿಮಾದಂತೆಯೇ, ಈ ಸಿನಿಮಾ ಕೂಡ ಖುಷಿಕೊಡಲಿದೆ ಎಂಬ ಮಾತು ಹೇಳಿದ್ದು ನಾಯಕಿ ರಶ್ಮಿಕಾ ಮಂದಣ್ಣ.

‘ಇಲ್ಲಿಯವರೆಗೂ ಮಳೆ ಯಾವಾಗ ನೋಡ್ತೀರಾ ಅಂತ ಕೇಳುತ್ತಿದ್ದರು. ಈಗ ಲೈಟ್ ಯಾವಾಗ ಆಫ್ ಮಾಡ್ತಿರಾ ಎಂದು ಕೇಳುತ್ತಾರೆ’ ಎಂದು ತಮ್ಮದೇ ಶೈಲಿನಲ್ಲಿ ಚಮಕ್ ನೀಡಿದರು ಗಣೇಶ್.

ತೆಲುಗು ನಟ ವಿಜಯ್ ದೇವರಕೊಂಡ ಒಂದು ವಿಡಿಯೊ ಹಾಡನ್ನು ಬಿಡುಗಡೆ ಮಾಡಿದರು. ‘ಚಮಕ್’ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಟಿ.ಆರ್. ಚಂದ್ರಶೇಖರ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.