ಪುಟಾಣಿಗಳ ಫ್ಯಾಷನ್

ಮುಖದಲ್ಲಿ ನಗುವುಕ್ಕಿಸುತ್ತಾ ರ‍್ಯಾಂಪ್ ಮೇಲೆ ಹೆಜ್ಜೆಯಿಡುವ ಪುಟಾಣಿ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟ. ಚಳಿಗಾಲದ ಬೆಚ್ಚನೆಯ ಬಗೆಬಗೆ ಉಡುಪುಗಳನ್ನು ತೊಟ್ಟು ಝಗಮಗಿಸುವ ಬೆಳಕಿನ ವಿನ್ಯಾಸದ ನಡುವೆ ಅವರು ನಡೆದು ಬಂದರೆ ಸ್ವರ್ಗಕ್ಕೆ ಮೂರೇ ಗೇಣು.
ಇಂತಿಪ್ಪ ಫ್ಯಾಷನ್ ಶೋ ಈಗಾಗಲೇ ಕೋಲ್ಕತ್ತ ಹಾಗೂ ಮುಂಬೈನಲ್ಲಿ ನಡೆದು ಮೆಚ್ಚುಗೆ ಗಳಿಸಿದೆ. ‘ಆಟಮ್ ವಿಂಟರ್ ಸೀಸನ್ ಚಿಲ್ಡ್ರನ್ಸ್ ಫ್ಯಾಷನ್ ಶೋ’ ಇದೀಗ ಬೆಂಗಳೂರಿಗೂ ಕಾಲಿಡುತ್ತಿದೆ.
ಶನಿವಾರ ಹಾಗೂ ಭಾನುವಾರ (ಡಿಸೆಂಬರ್ 9 ಹಾಗೂ 10) ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಶೆರಟನ್ ಗ್ರಾಂಡ್‌ನಲ್ಲಿ ಮಕ್ಕಳ ಕಲರವ ಕೇಳಲಿದೆ. ಫ್ಯಾಷನ್ ಶೋನಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಳ್ಳಲಾಗಿದ್ದು, ಶನಿವಾರ ಸೂಪರ್ ಮಾಡೆಲ್, ಶಿಕ್ಷಣ ತಜ್ಞೆ, ಸಂಯೋಜಕಿ ಎಂದು ಖ್ಯಾತಿ ಗಳಿಸಿರುವ ಜೆಸ್ಸಿಕಾ ಗೋಮ್ಸ್ ಸುರಾನಾ, ಮಕ್ಕಳಿಗೆ ಫ್ಯಾಷನ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ತರಬೇತಿ ಪಡೆದ 4ರಿಂದ 14 ವರ್ಷ ವಯೋಮಿತಿಯ ಮಕ್ಕಳು ವಿವಿಧ ಬ್ರಾಂಡ್ ಉಡುಪು ಧರಿಸಿ ಭಾನುವಾರ ನಡೆಯುವ ಫ್ಯಾಷನ್ ಶೋನಲ್ಲಿ ರ‍್ಯಾಂಪ್‌ವಾಕ್ ಮಾಡಲಿದ್ದಾರೆ.
ಸ್ಥಳ– ಶೆರಟನ್ ಗ್ರಾಂಡ್, ಬ್ರಿಗೇಡ್ ಗೇಟ್‌ವೇ, ಡಾ.ರಾಜ್‌ಕುಮಾರ ರಸ್ತೆ, ರಾಜಾಜಿನಗರ. ಫ್ಯಾಷನ್ ಶೋ ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.