ಬುಧವಾರ, ಮಾರ್ಚ್ 3, 2021
25 °C

ನಿಥಾರಿ ಸರಣಿ ಹತ್ಯೆ: ಅಪರಾಧಿಗಳಿಗೆ ಮತ್ತೊಂದು ಪ್ರಕರಣದಲ್ಲಿ ಗಲ್ಲು

ಪಿಟಿಐ Updated:

ಅಕ್ಷರ ಗಾತ್ರ : | |

ನಿಥಾರಿ ಸರಣಿ ಹತ್ಯೆ: ಅಪರಾಧಿಗಳಿಗೆ ಮತ್ತೊಂದು ಪ್ರಕರಣದಲ್ಲಿ ಗಲ್ಲು

ಗಾಜಿಯಾಬಾದ್: ನಿಥಾರಿ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೊಯಿಡಾದ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಮನೆ ಕೆಲಸಗಾರ ಸುರೇಂದ್ರ ಕೋಲಿಗೆ ಗಲ್ಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದೆ.

25 ವರ್ಷದ ಮನೆ ಕೆಲಸ ದವಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ಕೋಲಿ ಆರೋಪಿಯಾಗಿರುವ 16 ಪ್ರಕರ ಣಗಳ ಪೈಕಿ ಇದು 9ನೇ ಪ್ರಕರಣ. ಕೋಲಿ ಮತ್ತು ಪಂಧೇರ್ ಇಬ್ಬರೂ ಭಾಗಿಯಾಗಿರುವ ಮೂರನೇ ಪ್ರಕರಣ.

ಮನೆ ಕೆಲಸದ ಮಹಿಳೆಯು 2006 ಅಕ್ಟೋಬರ್ 12ರಂದು ಕಣ್ಮರೆಯಾಗಿದ್ದರು. ನಂತರ, ನಿಥಾರಿ ಗ್ರಾಮದಲ್ಲಿರುವ ‍ಪಂಧೇರ್  ಮನೆಯ ಹಿಂದೆ ಶವ ಪತ್ತೆಯಾಗಿತ್ತು. ಒಟ್ಟೂ 16 ತಲೆಬುರುಡೆಗಳು ಪತ್ತೆಯಾಗಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.