ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಮನಸ್ಸುಗಳ ಸಂಘಟಿಸಲಿ

Last Updated 9 ಡಿಸೆಂಬರ್ 2017, 8:53 IST
ಅಕ್ಷರ ಗಾತ್ರ

ಮಾಯಕೊಂಡ: ‘ಕನ್ನಡ ಕಟ್ಟುವ ಮನಸ್ಸುಗಳಿಂದ ಮಾತ್ರ ಕನ್ನಡದ ಉಳಿವು   ಸಾಧ್ಯ’ ಎಂದು  ಸಾಹಿತಿ ಮಹೇಶ್ ಚಟ್ನಳ್ಳಿ ಅಭಿಪ್ರಾಯಪಟ್ಟರು.  ಕನ್ನಡ ಯುವಶಕ್ತಿ ಕೇಂದ್ರ ಶುಕ್ರವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಜಗತ್ತಿನ ಯಾವ ಭಾಷೆಗೂ ಇರದಷ್ಟು ಸಾಹಿತ್ಯಿಕ ಶ್ರೀಮಂತಿಕೆ ಕನ್ನಡಕ್ಕಿದೆ. ಭಾಷೆಯನ್ನು ಉಳಿಸಿ, ಬೆಳೆಸುವ ಸಾಂಸ್ಕೃತಿಕ ಜವಾಬ್ದಾರಿ ಎಲ್ಲರಿಗೂ ಇರಬೇಕು.

ಕೇವಲ ಪ್ರಾಜ್ಞರಿಂದ ಕನ್ನಡ ಭಾಷೆ ಉಳಿದಿಲ್ಲ. ಕೇವಲ ಭೌತಿಕ ಕಟ್ಟಡ ಕಟ್ಟಿದರೆ ಸಾಲದು, ಮನಸ್ಸುಗಳನ್ನು ಕಟ್ಟಬೇಕಿದೆ. ಭಾಷೆ ಮನಸುಗಳನ್ನು ಸಂಘಟಿಸಬೇಕೆ ವಿನಾ ವಿಘಟಿಸಬಾರದು ಎಂದರು.

ಸಾಹಿತಿ ನಾ.ಡಿಸೋಜ  ಮಾತನಾಡಿ, ‘ಕನ್ನಡ ಏಕೀಕರಣಕ್ಕಾಗಿ ಸಾಹಿತಿಗಳು, ಹೋರಾಟಗಾರರು ಅಪಾರ ಶ್ರಮಿಸಿದ್ದಾರೆ. ಬಿಎಂಶ್ರೀ ಅವರು ಕನ್ನಡ ಧ್ವಜಗೀತೆ ರಚಿಸಿ ಕನ್ನಡಕ್ಕೆ ಪ್ರಾಧಾನ್ಯತೆ ತಂದಿತ್ತರು. ಪೋಷಕರು ಇಂಗ್ಲಿಷ್ ವ್ಯಾಮೋಹ ತ್ಯಜಿಸಿ ಕನ್ನಡಾಭಿಮಾನ ಬೆಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ ಮಾತನಾಡಿ, ‘ ಕರ್ನಾಟಕದ ವಿವಿಧ ಭಾಗಗಳಲ್ಲಿ ಕನ್ನಡ ನಾಶವಾಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ಮಾತ್ರ ಉಳಿದಿದೆ. ಎಲ್ಲಾ ಕಡೆ ಮಾಯಕೊಂಡದ ಯುವಶಕ್ತಿ ಕೇಂದ್ರದಂಥ ಸಂಘಟನೆ ಇರಬೇಕು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ. ಆರ್. ಲಕ್ಷ್ಮಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರನ್ನು ಮತ್ತು ಹೆಚ್ಚು ಅಂಕಗಳಸಿದವರನ್ನು, ಕ್ರೀಡಾ ಸಾಧಕರನ್ನು ಗೌರವಿಸಲಾಯಿತು. ಆರೋಗ್ಯ ಇಲಾಖೆಯ ಪ್ರಬಂಧ ಸ್ಪರ್ಧೆ ವಿಜೇತರನ್ನು ಪುರಸ್ಕರಿಸಲಾಯಿತು.

ಉಮಾಶಂಕರ್ ಧ್ವಜಾರೋಹಣ ನೆರವೇರಿಸಿದರು. ಕೆ. ರವಿ ಸ್ವಾಗತಿಸಿದರು. ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮಣ ತಂಡದವರು ನಿರೂಪಿಸಿದರು. ಕುಮಾರಸ್ವಾಮಿ ವಂದಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ ಪರಮೇಶ್ವರಪ್ಪ , ಮಾಜಿ ಪುರಸಭಾಧ್ಯಕ್ಷ ಎಸ್. ನೀಲಪ್ಪ, ಪಿಡಿಒ ಸುಮಲತಾ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಶಾಂತ ಗಂಗಾಧರ, ಕನ್ನಡ ಯುವಶಕ್ತಿ ಕೆಂದ್ರದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.

ಪ್ರಶಸ್ತಿಗೆ ಬರೀತೀರಾ…
‘ಮಕ್ಕಳ ಸಾಹಿತ್ಯ ರಚನೆಗೆ ನಿಮಗೆ ಪ್ರೇರಣೆಯೇನು? ನಿಮ್ಮ ಸಾಹಿತ್ಯದಿಂದ ಜನ ಬದಲಾಗಿದ್ದಾರೆಯೇ?, ಪ್ರಶಸ್ತಿ ಬರಲೀ ಅಂತಾ ಬರೆದಿದ್ದೀರಾ ಎಂಬ ಪ್ರಶ್ನಗೆಳು ವಿದ್ಯಾರ್ಥಿಗಳಿಂದ ತೂರಿಬಂದವು. ಪ್ರಶ್ನೆಗೆ ಉತ್ತರಿಸಿದ ಡಿಸೋಜ, ತಂದೆ ಶಿಕ್ಷಕರು ಪುಸ್ತಕ ಓದುವ ಪ್ರವೃತ್ತಿ ಬರೆಯಲು ಪ್ರೇರೇಪಿಸಿತು. ಜನ ಬದಲಾಯಿಸುವಂತೆ ಮಾಡುವುದು ಸಾಹಿತ್ಯದ ಉದ್ದೇಶವಲ್ಲ. ನನಗೆ ನನಗೆ ಪ್ರಶಸ್ತಿ ಹಂಬಲವಿಲ್ಲ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT