ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂತೆ ನಿಂತ ಚರಂಡಿ ನೀರು

ರಾಂಪುರ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಭಯ: ತೆರವುಗೊಳಿಸಲು ಆಗ್ರಹ
Last Updated 9 ಡಿಸೆಂಬರ್ 2017, 10:06 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಾಚಿ ಬೆಳೆದು ಹಲವು ವರ್ಷಗಳಿಂದ ಕೆರೆಯಂತೆ ನಿಂತಿರುವ ಕೊಳಚೆ ನೀರು, ಕಂಡರೂ ಕಾಣದಂತೆ ಇರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು... ಸಮೀಪದ ರಾಂಪುರ ಗ್ರಾಮದ ಪ್ರಭುಲಿಂಗೇಶ್ವರ ಮಠದ ಪರಿಸರದ ದುಸ್ಥಿತಿ ಇದು.

ಮಠದ ಬಳಿ ಕೆರೆಯಂತೆ ನಿಂತಿರುವ ಚರಂಡಿ ನೀರು ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು, ಹಲವು ಸಾಂಕ್ರಾಮಿಕ ರೊಗಗಳನ್ನು ಹರಡುತ್ತಿದೆ. ಅಲ್ಲದೇ ಪರಿಸರ ಗಬ್ಬೆದ್ದು ನಾರುತ್ತಿದ್ದು, ಸುತ್ತಮುತ್ತಲಿನ ಮನೆಯವರು ನೆಮ್ಮದಿಯ ಬಾಳು ನಡೆಸುವುದು ದುಸ್ತರವಾಗಿದೆ. ಈ ಕುರಿತು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

‘ಮುಂದೆ ಹರಿದು ಹೊಗಲು ದಾರಿ ಇರದ ಕಾರಣ ಊರಿನ ಎಲ್ಲ ಗಟಾರ ನೀರು ಇಲ್ಲಿ ಜಮೆಯಾಗಿದೆ. ಮಳೆಗಾಲದಲ್ಲಿ ಕೊಳಚೆ ನೀರು ಮನೆಯ ಬಾಗಿಲಿಗೆ ಬರುತ್ತದೆ. ಈ ಕುರಿತು ಸಾಕಷ್ಟು ಬಾರಿ ದೂರಿದ್ದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಸ್ಥಳೀಯ ನಿವಾಸಿ.

***

ಕಳೆದ ಗ್ರಾಮ ಸಭೆಯಲ್ಲಿ ಪ್ರಭುಲಿಂಗೇಶ್ವರ ಮಠದ ಹತ್ತಿರ ಚರಂಡಿ ದುರಸ್ತಿಗೆ ಕ್ರಿಯಾ ಯೋಜನೆ ರೂಪಿಸಿದ್ದೇವೆ. ತ್ವರಿತ ಗತಿಯಲ್ಲಿ ದುರಸ್ತಿ ಕಾಮಗಾರಿ ಮಾಡಿಸಲಾಗುವುದು
--ಬಿ.ಎನ್.ಇಟಗಿಮಠ
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT