ಸೋಮವಾರ, ಮಾರ್ಚ್ 1, 2021
30 °C

ಗುಜರಾತ್‌ ಚನಾವಣೆ: ಮಧ್ಯಾಹ್ನದವರೆಗೆ ಶೇ.35.52ರಷ್ಟು ಮತ ಚಲಾವಣೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗುಜರಾತ್‌ ಚನಾವಣೆ: ಮಧ್ಯಾಹ್ನದವರೆಗೆ ಶೇ.35.52ರಷ್ಟು ಮತ ಚಲಾವಣೆ

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮೊದಲ ಹಂತದಲ್ಲಿ ಮಧ್ಯಾಹ್ನ 2ರವರೆಗೆ ಶೇ. 35.52ರಷ್ಟು ಮತ ಚಲಾವಣೆಯಾಗಿವೆ ಎಂದು ವರದಿಯಾಗಿದೆ.

ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಶೇ.30.31ರಷ್ಟು ಮತ ಚಲಾವಣೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸಂಜೆ 5ರವರೆಗೆ ಮತ ಚಲಾವಣೆ ನಡೆಯಲಿದೆ.

ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ತಾಪಿ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಅತಿ ಹೆಚ್ಚು ಶೇ. 38.07ರಷ್ಟು ಮತ ಚಲಾವಣೆಯಾಗಿವೆ. ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ದಕ್ಷಿಣ ಗುಜರಾತ್‌ನ ಮತ್ತೊಂದು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಶೇ. 25.67ರಷ್ಟು ಮತ ಚಲಾವಣೆಯಾಗಿವೆ.

ಸೌರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನ 89 ಕ್ಷೇತ್ರಗಳಲ್ಲಿ ಮತದಾರರು ಬೆಳಿಗ್ಗೆಯಿಂದ ಆಸಕ್ತಿ ವಹಿಸಿ ಮಗಗಟ್ಟೆಯತ್ತ ಬರುತ್ತಿದ್ದು, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮೊಲಬಾರಿಗೆ ಮತ ಚಲಾಯಿಸಿದ ಯುವ ಸಮೂಹದಲ್ಲಿ ಸಂತಸ, ಸಂಭ್ರಮ ಕಾಣುತ್ತಿತ್ತು. ಇನ್ನು ಶತಾಯುಷಿಗಳು ಮಕ್ಕಳು, ಮೊಮ್ಮಕ್ಕಳ ನೆರವು ಪಡೆದು ಮತ ಚಲಾಯಿಸಿದರು.

115 ವರ್ಷದ ಶತಾಯುಷಿ ಮಹಿಳೆ ಆಜಿಬೆನ್ ಚಂದ್ರವಾಡಿಯಾ ಅವರು ರಾಜ್‌ಕೋಟ್‌ನ ಉಪ್ಲೇಟ ನಗರದಲ್ಲಿ ಇಂದು ಮತ ಚಲಾವಣೆ ಮಾಡಿದ್ದಾರೆ.   

24,689 ಮತಗಟ್ಟೆಗಲ್ಲಿ ಮತ ಚಲಾವಣೆ ನಡೆಯುತ್ತಿದ್ದು, 27,158 ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗಿದೆ.

ಡಿ.14ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.18ರಂದು ಫಲಿತಾಂಶ ಹೊರ ಬೀಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.