ಸೋಮವಾರ, ಮಾರ್ಚ್ 8, 2021
29 °C

ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್: ಗುಜರಾತ್‌ಗೆ ಇನಿಂಗ್ಸ್‌ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್: ಗುಜರಾತ್‌ಗೆ ಇನಿಂಗ್ಸ್‌ ಮುನ್ನಡೆ

ಮೈಸೂರು: ಕೆ.ಆರ್.ಪಟೇಲ್ (49ಕ್ಕೆ 4) ಮತ್ತು ಹಿತಾನ್ಶು ಪಾಂಡ್ಯ (40ಕ್ಕೆ 3) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಗುಜರಾತ್ ತಂಡ ಕೂಚ್ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನ ಕರ್ನಾಟಕ 76.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟಾಯಿತು. 7 ವಿಕೆಟ್‌ಗೆ 209 ರನ್‌ಗಳೊಂದಿಗೆ ಶನಿವಾರ ಆಟ ಮುಂದುವರಿಸಿದ್ದ ಗುಜರಾತ್ ಮೊದಲ ಇನಿಂಗ್ಸ್‌ನಲ್ಲಿ 217 ರನ್‌ಗಳಿಗೆ ಆಲೌಟಾಗಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ ಮೂರು ರನ್‌ ಗಳಿಸಿರುವ ಗುಜರಾತ್ ತಂಡ ಒಟ್ಟಾರೆ 57 ರನ್‌ಗಳ ಮುನ್ನಡೆ ಪಡೆದಿದ್ದು, ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ.

ಬ್ಯಾಟಿಂಗ್‌ ವೈಫಲ್ಯ: ಗುಜರಾತ್ ಬೌಲರ್‌ಗಳ ಶಿಸ್ತಿನ ದಾಳಿಗೆ ನಲುಗಿದ ಕರ್ನಾಟಕ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. 40 ರನ್‌ ಗಳಿಸುವಷ್ಟರಲ್ಲಿ ತಂಡದ ಆರು ವಿಕೆಟ್‌ಗಳು ಬಿದ್ದವು. ಶುಭಾಂಗ್ ಹೆಗ್ಡೆ (ಅಜೇಯ 61, 186 ಎಸೆತ, 6 ಬೌಂ, 1 ಸಿಕ್ಸರ್‌) ಮತ್ತು ಬಿ.ಎಂ.ಶ್ರೇಯಸ್ (23) ಅಲ್ಪ ಹೋರಾಟ ನಡೆಸಿದ ಕಾರಣ ತಂಡದ ಮೊತ್ತ 150 ರನ್‌ಗಳ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌

ಗುಜರಾತ್ ಮೊದಲ ಇನಿಂಗ್ಸ್‌ 95.2 ಓವರ್‌ಗಳಲ್ಲಿ 217 ಮತ್ತು ಎರಡನೇ ಇನಿಂಗ್ಸ್‌ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 3;

ಕರ್ನಾಟಕ ಮೊದಲ ಇನಿಂಗ್ಸ್‌ 76.4 ಓವರ್‌ಗಳಲ್ಲಿ 163 (ನಿಕಿನ್ ಜೋಸ್ 14, ಲವನೀತ್ ಸಿಸೋಡಿಯಾ 10, ಸುಜಯ್ ಸತೇರಿ 17, ಶುಭಾಂಗ್ ಹೆಗ್ಡೆ ಔಟಾಗದೆ 61, ಬಿ.ಎಂ.ಶ್ರೇಯಸ್ 23, ಕೆ.ಆರ್.ಪಟೇಲ್ 49ಕ್ಕೆ 4, ಹಿತಾನ್ಶು ಪಾಂಡ್ಯ 40ಕ್ಕೆ 3, ಪಿ.ಎನ್.ಜಡೇಜ 30ಕ್ಕೆ 2)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.