ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 9000 ವಿದ್ಯುತ್‌ ಬಾಕಿ ಹಣ ಪಾವತಿಗೆ ನ್ಯಾಯಾಲಯದಿಂದ ನೋಟಿಸ್‌: ಮಧ್ಯಪ್ರದೇಶ ರೈತ ಆತ್ಮಹತ್ಯೆ

Last Updated 11 ಡಿಸೆಂಬರ್ 2017, 13:13 IST
ಅಕ್ಷರ ಗಾತ್ರ

ಹಾರ್ದಾ: ಪಾವತಿಸದೆ ಉಳಿಸಿಕೊಂಡಿರುವ ₹ 9 ಸಾವಿರ ವಿದ್ಯುತ್‌ ಬಾಕಿಯನ್ನು ಕಟ್ಟುವಂತೆ ಸೂಚಿಸಲಾಗಿದ್ದ ನೋಟಿಸ್‌ ಪಡೆದ ನಂತರ ಇಲ್ಲಿನ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಅಬ್ಗಾನ್‌ ಕಾಲಾ ಹಳ್ಳಿಯ ಬಾವಿಯೊಂದರಲ್ಲಿ ತೇಲುತ್ತಿದ್ದ ಶವವನ್ನು, ರೈತ ದಿನೇಶ್‌ ಪಾಂಡೆ(60) ಅವರದ್ದು ಎಂದು ಗುರುತಿಸಲಾಗಿದೆ ಎಂದು ಇಲ್ಲಿನ ಎಸ್‌ಪಿ ರಾಜೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆ ಸಂಪೂರ್ಣವಾದ ಬಳಿಕ ಆತ್ಮಹತ್ಯೆಯ ನಿಖರ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.

‘ಸ್ಥಳೀಯ ನ್ಯಾಯಾಲಯ ತಮ್ಮ ತಂದೆಗೆ ಮೂರು ದಿನಗಳ ಹಿಂದೆ ಪೊಲೀಸರ ಮೂಲಕ ನೋಟಿಸ್‌ ನೀಡಿತ್ತು. ಅದರಲ್ಲಿ ₹ 9,111 ವಿದ್ಯುತ್‌ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು’ ಎಂದು ಮೃತ ರೈತನ ಮಗ ಸಂಜಯ್‌ ಪಾಂಡೆ ಹೇಳಿಕೆ ನೀಡಿದ್ದಾರೆ.

ನೋಟಿಸ್‌ ಪಡೆದಾಗಿನಿಂದ ದಿನೇಶ್‌ ಪಾಂಡೆ ಒತ್ತಡಕ್ಕೊಳಗಾಗಿದ್ದರು ಹಾಗೂ ಭಾನುವಾರ ಮಧ್ಯಾಹ್ನದಿಂದಲೇ ನಾಪತ್ತೆಯಾಗಿದ್ದರು ಎಂದೂ ಸಂಜಯ್‌ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT