ಶನಿವಾರ, ಮಾರ್ಚ್ 6, 2021
30 °C

ಕೊಹ್ಲಿ–ಅನುಷ್ಕಾ ಮದುವೆ: ಅಭಿಮಾನಿಗಳ ‘ಸಂಭ್ರಮ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕೊಹ್ಲಿ–ಅನುಷ್ಕಾ ಮದುವೆ: ಅಭಿಮಾನಿಗಳ ‘ಸಂಭ್ರಮ’

ಮುಂಬೈ: ಕ್ರಿಕೆಟ್‌ ಲೋಕದ ಮಿಂಚು ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ಹಸೆಮಣೆ ಏರಿದ ಸಂಭ್ರಮ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತು. ನವಜೋಡಿಗೆ ವಿವಿಧ ಬಗೆಯಲ್ಲಿ ಶುಭ ಹಾರೈಸಿದರು.

ಕೊಹ್ಲಿ ಮತ್ತು ಅನುಷ್ಕಾ ಇಟಲಿಯ ಮಿಲಾನ್‌ನಲ್ಲಿ ಸೋಮವಾರ ವಿವಾಹಿತರಾಗಿದ್ದರು. ಈ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಭಾರತದ ಮುದ್ರಣ ಮಾಧ್ಯಮಗಳಲ್ಲಿ ಮಂಗಳವಾರ ಇದು ಮುಖಪುಟದ ಸುದ್ದಿಯಾಗಿತ್ತು. ಪತ್ರಿಕೆಗಳು ಈ ಮದುವೆಯನ್ನು ವಿವಿಧ ರೀತಿಯಲ್ಲಿ ಬಣ್ಣಿಸಿವೆ.

ಕೆಲವು ಪತ್ರಿಕೆಗಳು ‘ಕ್ಲೀನ್‌ ಬೌಲ್ಡ್‌’ ಎಂದು ಬರೆದಿದ್ದರೆ ಇನ್ನು ಕೆಲವು ಪತ್ರಿಗಳು ಈ ಜೋಡಿಯ ಹೊಸ ಇನಿಂಗ್ಸ್‌ ಆರಂಭವಾಗಿದೆ ಎಂದು ಬರೆದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.