ನಿಧನ: ಮನಮೋಹನ್ ಅತ್ತಾವರ್

7

ನಿಧನ: ಮನಮೋಹನ್ ಅತ್ತಾವರ್

Published:
Updated:
ನಿಧನ: ಮನಮೋಹನ್ ಅತ್ತಾವರ್

ಬೆಂಗಳೂರು: ಇಂಡೊ–ಅಮೆರಿಕನ್ ಹೈಬ್ರಿಡ್ ಸೀಡ್ಸ್ (ಇಂಡಿಯಾ) ಕಂಪೆನಿಯ ಅಧ್ಯಕ್ಷ ಮನಮೋಹನ್ ಅತ್ತಾವರ್ (85) ಮಂಗಳವಾರ ನಿಧನರಾಧರು.

ಅವರಿಗೆ ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅತ್ತಾವರ್ ಅವರು ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ರಾಷ್ಟ್ರೀಯ ಪ್ರಶಸ್ತಿ, ಐಸಿಎ ಸುವರ್ಣ ಮಹೋತ್ಸವ ಅಂತರರಾಷ್ಟ್ರೀಯ ಪ್ರಶಸ್ತಿ, ಐಎಸ್‌ಎಫ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರನ್ನು ರಾಜ್ಯದ ಆಧುನಿಕ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ ಹಾಗೂ ಖಾಸಗಿ ಹೈಬ್ರಿಡ್ ಬೀಜಗಳ ಉತ್ಪಾದನೆಯ ರೂವಾರಿ ಎಂದು ಕರೆಯಲಾಗುತ್ತದೆ.

ಆಧುನಿಕ ಹಾಗೂ ಪ್ರಗತಿಪರ ಹೈಬ್ರಿಡ್ ಬೀಜಗಳ ತಯಾರಿಕಾ ವಾಣಿಜ್ಯೋದ್ಯಮ ಸ್ಥಾಪಿಸಿದ ಹೆಗ್ಗಳಿಕೆಯೂ ಮನಮೋಹನ್ ಅತ್ತಾವರ್ ಅವರಿಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry