7

ಸುಗಮ ಪ್ರವಾಸಕ್ಕೆ ತಂತ್ರಜ್ಞಾನ

Published:
Updated:
ಸುಗಮ ಪ್ರವಾಸಕ್ಕೆ ತಂತ್ರಜ್ಞಾನ

ಪ್ರವಾಸಕ್ಕೆ ಹೊರಡಬೇಕೆಂದರೆ ಬ್ಯಾಗ್‌ ತುಂಬಾ ಬಟ್ಟೆಬರೆ ತುಂಬಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಬಟ್ಟೆಗಳ ಜತೆಗೆ ಕೆಲವೊಂದಷ್ಟು ಗ್ಯಾಜೆಟ್‌ಗಳೂ ಬ್ಯಾಗ್‌ ಸೇರುವುದು ಸಾಮಾನ್ಯ. ಕ್ಯಾಮೆರಾ, ಚಾರ್ಜರ್‌, ಅಡಾಪ್ಟರ್‌ ಪ್ಲಗ್, ಪವರ್‌ಬ್ಯಾಂಕ್‌ – ಹೀಗೆ ಸಾಕಷ್ಟು ಉಪಕರಣಗಳು ಈಗ ಪ್ರವಾಸದ ಬ್ಯಾಗ್‌ ಸೇರುತ್ತವೆ.

ಪ್ರವಾಸಕ್ಕೆ ಹೋಗುವ ವೇಳೆ ಸಾಕಷ್ಟು ವಸ್ತುಗಳು ಬೇಕಾಗುತ್ತವೆ. ಆದರೆ, ಹೆಚ್ಚಿನ ವಸ್ತುಗಳನ್ನು ತುಂಬಿಕೊಂಡು ಬ್ಯಾಗ್‌ ಹೊರೆಯಾಗದಂತೆ ಕಾಯ್ದುಕೊಳ್ಳುವುದೂ ಒಂದು ಸವಾಲು. ಪ್ರವಾಸದ ವೇಳೆ ನಿಮ್ಮ ಲಗೇಜ್‌ ಹೊರೆ ಕಡಿಮೆ ಇದ್ದಷ್ಟೂ ಒಳ್ಳೆಯದು.

ನೀವು ಎಲ್ಲಿಗೆ ಪ್ರವಾಸ ಹೊರಡುತ್ತಿದ್ದೀರೋ ಆ ಸ್ಥಳದ ಬಗ್ಗೆ ಅಂತರ್ಜಾಲದಲ್ಲಿ ಮೊದಲೇ ಮಾಹಿತಿ ಹುಡುಕಿಕೊಳ್ಳಿ. ಕೆಲವು ಪ್ರವಾಸಿ ಸ್ಥಳಗಳ ಅಂತರ್ಜಾಲ ತಾಣ, ಆ್ಯಪ್‌ಗಳೂ ಈಗ ಲಭ್ಯ. ಈ ವೆಬ್‌ಸೈಟ್‌ / ಆ್ಯಪ್‌ಗಳು ನಿಮ್ಮ ಹುಡುಕಾಟದ ಶ್ರಮವನ್ನು ಬಹುತೇಕ ತಗ್ಗಿಸುತ್ತವೆ.

ನೀವು ಹೋಗಬೇಕೆಂದಿರುವ ಪ್ರವಾಸಿ ಸ್ಥಳ, ಅದರ ಸಮೀಪದಲ್ಲೇ ಇರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವೆಬ್‌ಸೈಟ್ ‌/ ಆ್ಯಪ್‌ಗಳಲ್ಲಿ ಮಾಹಿತಿ ಸಿಗುತ್ತದೆ.

ಗೂಗಲ್‌ ಟ್ರಿಪ್ಸ್ (Google Trips) ಆ್ಯಪ್‌ ನಿಮ್ಮ ಪ್ರವಾಸವನ್ನು ಇನ್ನಷ್ಟು ಸುಗಮಗೊಳಿಸಬಲ್ಲದು. ಈ ಆ್ಯಪ್‌ ಪ್ರೇಕ್ಷಣೀಯ ಸ್ಥಳಗಳ ಸಚಿತ್ರ ಮಾಹಿತಿ ನೀಡುವುದರ ಜತೆಗೆ ನಿಮ್ಮ ಜಿ–ಮೇಲ್‌ಗೆ ಸಿಂಕ್‌ ಆಗಿರುವ ವಿಮಾನ, ರೈಲು, ಬಸ್ ಪ್ರಯಾಣದ ಮಾಹಿತಿ, ಕಾರ್‌, ಹೋಟೆಲ್‌ ರೂಮ್‌ಗಳನ್ನು ಕಾಯ್ದಿರಿಸಿರುವ ಮಾಹಿತಿಯನ್ನೆಲ್ಲಾ ಕಲೆಹಾಕಿ ನಿಮ್ಮ ಪ್ರವಾಸಕ್ಕೆ ಅನುಕೂಲವಾಗುತ್ತದೆ.

ನೀವು ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು, ಎಲ್ಲೆಲ್ಲಿ ಉತ್ತಮ ಹೋಟೆಲ್‌, ರೆಸ್ಟೊರಂಟ್‌ ವ್ಯವಸ್ಥೆ ಇದೆ ಎಂಬುದನ್ನು ಈ ಆ್ಯಪ್‌ ತಿಳಿಸುತ್ತದೆ. ಜತೆಗೆ ನೀವು ಪ್ರವಾಸಕ್ಕೆ ನಿಗದಿಪಡಿಸಿಕೊಂಡಿರುವ ದಿನಗಳ ಆಧಾರದ ಮೇಲೆ ಯಾವ ದಿನ ಎಲ್ಲೆಲ್ಲಿ ಸುತ್ತಾಡಬಹುದು ಎಂಬುನ್ನು ಈ ಆ್ಯಪ್‌ನ Day plansನಲ್ಲಿ ಸೇರಿಸಬಹುದು.

ಪ್ರವಾಸಕ್ಕೆ ಹೊರಡುವ ಮೊದಲು ವಿಮಾನಗಳ ಮಾಹಿತಿಗಾಗಿ ಗೂಗಲ್‌ ಫ್ಲೈಟ್ಸ್‌ (Google Flights) ನೋಡಬಹುದು. ಪ್ರವಾಸದ ಸ್ಥಳದಲ್ಲಿ ನಿಮಗೆ ಗೂಗಲ್‌ ಮ್ಯಾಪ್‌ ನೆರವಿಗೆ ಬರುತ್ತದೆ. ಪ್ರವಾಸಿ ಸ್ಥಳದಲ್ಲಿ ಓಡಾಡಲು ಟ್ಯಾಕ್ಸಿ ಬುಕ್ಕಿಂಗ್‌ಗೆ ನೆರವಾಗುವಂಥ ಉಬರ್‌, ಓಲಾದಂಥ ಆ್ಯಪ್‌ಗಳು ನಿಮ್ಮ ಡಿವೈಸ್‌ನಲ್ಲಿದ್ದರೆ ಉತ್ತಮ.

ಪ್ರವಾಸದ ವೇಳೆ ಓದುವ ಅಭ್ಯಾಸವಿದ್ದರೆ ಕಿಂಡಲ್‌ ಅಥವಾ ಇ– ರೀಡರ್ ಬಳಸಬಹುದು. ಅಗತ್ಯ ಇದ್ದರೆ ಮಾತ್ರ ಲ್ಯಾಪ್‌ಟಾಪ್‌ ಒಯ್ಯಿರಿ. ಇಲ್ಲವಾದರೆ ಸ್ಮಾರ್ಟ್‌ಫೋನ್ ಇಲ್ಲವೇ ಟ್ಯಾಬ್‌ ಸಾಕು.

ಚಾರ್ಜರ್‌, ಅಡಾಪ್ಟರ್‌ ಪ್ಲಗ್, ಪವರ್‌ಬ್ಯಾಂಕ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಹೆಚ್ಚು ವಿಡಿಯೊ ರೆಕಾರ್ಡ್‌ ಮಾಡುವ ಯೋಜನೆ ಇದ್ದರೆ ಮಾತ್ರ ಟ್ರೈಪಾಡ್‌ ಒಯ್ಯಬಹುದು. ಇಲ್ಲವಾದರೆ ಟ್ರೈಪಾಡ್‌ ಅನಗತ್ಯ ಹೊರೆಯಾಗುತ್ತದೆ. ಬೇಕೆಂದರೆ ಸೆಲ್ಫೀಸ್ಟಿಕ್‌ ಬ್ಯಾಗ್‌ಗೆ ಸೇರಿಸಿಕೊಳ್ಳಬಹುದು.

ಜಿಪಿಎಸ್‌ ಸಂಪರ್ಕ ಸಾಧ್ಯವಾಗುವಂಥ ಬ್ಯಾಗ್‌ಗಳೂ ಈಗ ಮಾರುಕಟ್ಟೆಗೆ ಬಂದಿವೆ. ಅನುಕೂಲವಿದ್ದವರು ಈ ಬ್ಯಾಗ್‌ಗಳನ್ನು ಖರೀದಿಸಬಹುದು. ಹೆಚ್ಚು ನಡಿಗೆ ಹಾಗೂ ಬೆಟ್ಟಗುಡ್ಡ ಹತ್ತುವುದಿದ್ದರೆ ಸ್ಮಾರ್ಟ್‌ ವಾಚ್‌ ಕಟ್ಟಿಕೊಳ್ಳುವುದು ಒಳ್ಳೆಯದು.

ಪ್ರವಾಸಕ್ಕೆ ಹೊರಡುವ ಮುನ್ನಾ ಈಗ ಹೇಳಿದ ಎಲ್ಲವನ್ನೂ ಹೊಂದಿಸಿಕೊಂಡಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರವಾಸಕ್ಕೆ ಹೋದ ಬಳಿಕ, ‘ಅದು ತರಲಿಲ್ಲ’, ‘ಇದನ್ನು ತರಬಾರದಿತ್ತು’ ಎಂದುಕೊಳ್ಳುವ ಬದಲು ಮೊದಲೇ ಸೂಕ್ತ ತಯಾರಿ ಮಾಡಿಕೊಳ್ಳಿ.

ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry