ಬುಧವಾರ, ಮಾರ್ಚ್ 3, 2021
19 °C

ಗುಜರಾತ್‌ ಚುನಾವಣೆ: ಸಾಬರಮತಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮತದಾನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗುಜರಾತ್‌ ಚುನಾವಣೆ: ಸಾಬರಮತಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮತದಾನ

ಅಹಮದಾಬಾದ್‌: ಗುಜರಾತ್‌ ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದರು.

ಇಲ್ಲಿನ ಸಾಬರಮತಿ ವಲಯದ 115ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ರಾನಿಪ್‌ ಭಾಗದಲ್ಲಿನ ಮತಗಟ್ಟೆಯಲ್ಲಿ ಸಾರ್ವಜನಿಕರೊಂದಿಗೆ ಸಾಲಿನಲ್ಲಿ ನಿಂತ ಪ್ರಧಾನಿ ತಮ್ಮ ಸರದಿ ಬಂದಾಗ ಮತದಾನ ನಡೆಸಿ ಮುಗುಳು ನಗೆ ಬೀರಿದರು. ಮತದಾನದ ನಂತರ ಶಾಯಿ ಹಾಕಿದ ತೋರು ಬೆರಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು.

ಹಾಲಿ ಶಾಸಕ ಬಿಜೆಪಿಯ ಅರವಿಂದ್ ಪಟೇಲ್‌ ಹಾಗೂ ಕಾಂಗ್ರೆಸ್‌ನ ಜಿತುಭಾಯ್‌ ‍ಪಟೇಲ್‌ ನಡುವೆ ಸಾಬರಮತಿ ಕ್ಷೇತ್ರದಲ್ಲಿ ಪೈಪೋಟಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.