7

ಬಿಹಾರ ಮತಗಟ್ಟೆ ಸಮೀಕ್ಷೆ ಬಗ್ಗೆ ನೆನಪಿದೆಯಾ?: ತೇಜಸ್ವಿ ಯಾದವ್ ಟ್ವೀಟ್

Published:
Updated:
ಬಿಹಾರ ಮತಗಟ್ಟೆ ಸಮೀಕ್ಷೆ ಬಗ್ಗೆ ನೆನಪಿದೆಯಾ?: ತೇಜಸ್ವಿ ಯಾದವ್ ಟ್ವೀಟ್

ನವದೆಹಲಿ: 2015ರ ಬಿಹಾರ ಚುನಾವಣೆ ಬಗ್ಗೆ ಮತಗಟ್ಟೆ ಸಮೀಕ್ಷೆ ನೆನಪಿದೆಯಾ? ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ. 2015ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಸಮೀಕ್ಷೆ ಹೇಳಿದ್ದರೂ, ಬಿಜೆಪಿ ಪರಾಭವಗೊಂಡಿತ್ತು ಎಂಬುದನ್ನು ತೇಜಸ್ವಿ ಯಾದವ್ ಇಲ್ಲಿ ಹೇಳಿದ್ದಾರೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ, ಇಂಥಾ ಭವಿಷ್ಯಗಳು ಸಂಪೂರ್ಣ ತಪ್ಪಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2015 ನವೆಂಬರ್‍‍‌ನಲ್ಲಿ ನಡೆದ ಬಿಹಾರ ಚುನಾವಣೆ ವೇಳೆ ವೇಳೆ ಎಲ್ಲ ಮತಗಟ್ಟೆ ಸಮೀಕ್ಷೆಗಳು ಎನ್‍ಡಿಎಗೆ ಬಹುಮತ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ  ಬಿಜೆಪಿಯನ್ನು ಪರಾಭವಗೊಳಿಸಿ ತೇಜಸ್ವಿ ಅವರ ರಾಷ್ಟ್ರೀಯ ಜನತಾ ದಳ ಮತ್ತು ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷ ಕಾಂಗ್ರೆಸ್‍ನೊಂದಿಗೆ ಮಹಾಮೈತ್ರಿ ಮಾಡಿ ಅಧಿಕಾರಕ್ಕೇರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry