ಶುಕ್ರವಾರ, ಫೆಬ್ರವರಿ 26, 2021
27 °C
ಜಲಗಡಿ ಪ್ರವೇಶಿಸಿದ ಆರೋಪ

43 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

43 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್‌

ಕರಾಚಿ: ಅರಬ್ಬಿ ಸಮುದ್ರದಲ್ಲಿನ ದೇಶದ ಜಲಗಡಿ ಉಲ್ಲಂಘಿಸಿ ಮೀನುಗಾರಿಕೆ ಮಾಡಿದ ಆರೋಪದಡಿ ಭಾರತದ 43 ಮೀನುಗಾರರನ್ನು ಪಾಕಿಸ್ತಾನದ ಕರಾವಳಿ ಭದ್ರತಾ ಪಡೆ(ಪಿಎಂಎಸ್‌ಎ) ಬಂಧಿಸಿದೆ. ಬಂಧಿತರಿಂದ 7 ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಎಂಎಸ್‌ಎ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಮೀನುಗಾರರನ್ನು ಸೆರೆಹಿಡಿಯಲು ಸ್ಪೀಡ್‌ಬೋಟ್‌ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿದೆವು. ಬಂಧಿತರನ್ನು ಬಂದರು ಠಾಣೆಯಲ್ಲಿ ಇರಿಸಿದ್ದೇವೆ. ಅವರನ್ನು ಮ್ಯಾಜಿಸ್ಟ್ರೆಟ್‌ ನ್ಯಾಯಾಲಯದಲ್ಲಿ ಹಾಜರು ಪಡಿಸಿ, ವಿಚಾರಣೆಗೆ ಒಳಪಡಿಸಲಾಗುತ್ತದೆ’ ಎಂದು ಪಿಎಂಎಸ್‌ಎ ಕಮಾಂಡರ್‌ ವಾಜೀದ್‌ ನವಾಜ್‌ ಚೌಧರಿ ತಿಳಿಸಿದರು.

ತನ್ನ ಜಲಗಡಿಯಲ್ಲಿ ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡಿದ ಆರೋಪದ ಮೇರೆಗೆ ಪಾಕಿಸ್ತಾನ ಈ ವರ್ಷದಲ್ಲಿ ಬಂಧಿಸಿದ ಮೀನುಗಾರರ ಸಂಖ್ಯೆ 400ರ ಗಡಿ ದಾಟಿದೆ.

‘ದೇಶದ ಜಲಗಡಿಯಲ್ಲಿ ನುಸುಳಿದ ಆರೋಪದ ಮೇರೆಗೆ ಪಿಎಂಎಸ್‌ಎ ಈ ವರ್ಷದ ನವೆಂಬರ್‌ 10ರಂದು 55, ನ.12 ರಂದು 23 ಹಾಗೂ ನ.16ರಂದು 23 ಭಾರತೀಯ ಮೀನುಗಾರರನ್ನು ಬಂಧಿಸಿದೆ’ ಎಂದು ಚೌಧರಿ ಮಾಹಿತಿ ನೀಡಿದರು.

ಪಿಎಂಎಸ್‌ಎ ಕಳೆದ ಅಕ್ಟೋಬರ್‌ನಲ್ಲಿ 50 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಅಲ್ಲದೆ, ಅ.29 ರಂದು ಸನ್ನಡತೆಯ ಆಧಾರದ ಮೇರೆಗೆ 68 ಭಾರತೀಯ ಮೀನುಗಾರರನ್ನು ಬಂಧಮುಕ್ತಗೊಳಿಸಿತ್ತು.

ದೇಶಗಳ ನಡುವೆ ನಿರ್ದಿಷ್ಟವಾಗಿ ಜಲಗಡಿ ನಿಗದಿ ಆಗದ ಕಾರಣ ಹಾಗೂ ದೋಣಿಗಳಲ್ಲಿ ಸುಧಾರಿತ ತಂತ್ರಜ್ಞಾನ ಇಲ್ಲದ ಕಾರಣ ಉಭಯ ದೇಶಗಳ ಮೀನುಗಾರರು ಬಂಧನವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.