ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ರಾಜಕೀಯ ಚಿಂತಕ, ಭಾಷಾಶಾಸ್ತ್ರಜ್ಞ ನೋಮ್‌ ಚಾಮ್‌ಸ್ಕಿ ಅವರ ಭಾಷೆಯ ಕುರಿತಾದ ಚಿಂತನೆಗಳನ್ನು ವಿದ್ವಾಂಸ ಕೆ.ವಿ. ನಾರಾಯಣ ಅವರು ಈ ಪುಸ್ತಕದಲ್ಲಿ ಸಂಗ್ರಹವಾಗಿ ಪರಿಚಯಿಸಿದ್ದಾರೆ. ಭಾಷೆಯ ಕುರಿತ ಚಾಮ್‌ಸ್ಕಿಯ ಚಿಂತನೆಗಳು ಭಾಷಾಶಾಸ್ತ್ರದಲ್ಲಿ ಹೊಸಪಲ್ಲಟಗಳನ್ನೇ ಉಂಟು ಮಾಡಿದವು. ಅವನ ಚಿಂತನೆಗಳ ಮಹತ್ವ ಎಷ್ಟು ಎಂದರೆ ಅವನನ್ನು ಭಾಷಾಶಾಸ್ತ್ರದ ನ್ಯೂಟನ್‌ ಎನ್ನುವಷ್ಟು.
ನುಡಿಯ ಕುರಿತ ಅವನ ವಿಚಾರಗಳನ್ನು ಕೆ.ವಿ.ಎನ್‌ ಅವರು ತಿಳಿಯಾಗಿ ಇಲ್ಲಿನ ಮೂರು ದೀರ್ಘ ಪ್ರಬಂಧಗಳಲ್ಲಿ ಪರಿಚಯಿಸಿದ್ದಾರೆ, ಚರ್ಚಿಸಿದ್ದಾರೆ. ಕನ್ನಡ ಜಗತ್ತಿಗೆ ಕೊಂಚ ಅಪರಿಚಿತವಾಗಿದ್ದ, ಆದರೆ ಅಗತ್ಯವಾಗಿದ್ದ ಚಾಮ್‌ಸ್ಕಿಯ ಚಿಂತನೆಗಳು ಈಗ ಈ ಪುಸ್ತಕದ ಮೂಲಕ ಕನ್ನಡ ಓದುಗರಿಗೆ ಸಿಗುವಂತಾಗಿದೆ. ಅವು ಕನ್ನಡದ್ದೇ ಆವರಣ, ವಿವರಣೆಗಳೊಂದಿಗೆ ಇಲ್ಲಿ ಬಂದಿವೆ. ಇದು ಚಾಮ್‌ಸ್ಕಿಯ ಭಾಷೆಯ ಕುರಿತ ಚಿಂತನೆಗೆ ಒಂದು ಸರಳ, ವಿರಳ ಪ್ರವೇಶ ಎಂದುಕೊಳ್ಳಬಹುದು. ಭಾಷೆಯ ಕುರಿತ ಹಳೆಯ ಪರಿಕಲ್ಪನೆಗಳಲ್ಲೇ ತೊಳಲಾಡಿ, ತೇಲಾಡುತ್ತಿರುವ ಮತ್ತು ಅದರಿಂದ ಹೊರಬರಲು ತಿಣುಕುತ್ತಿರುವ ಭಾಷಾತಜ್ಞರಿಗೆ ಇಲ್ಲಿ ಹೊಸ ಹೊಳಹುಗಳು, ಬೆಳಕಿಂಡಿಗಳಿವೆ. ಭಾಷೆಯ ಕುರಿತ ನಮ್ಮ ಆಲೋಚನೆಗಳನ್ನು ಅವು ಬೇರೊಂದು ದಿಕ್ಕಿಗೆ ಕರೆದೊಯ್ಯಬಹುದು ಮತ್ತು ಹೊಸ ಬೆಳಕಿನಲ್ಲಿ ನೋಡುವಂತೆ ಮಾಡಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT