7

‘ಎರಡು ರೀತಿ ಹೆಸರು; ಉದ್ಯೋಗಕ್ಕೆ ತೊಂದರೆಯೇ?’

Published:
Updated:

1. ನಾನು ಎಂ.ಎಸ್ಸಿ. ಭೂಗೋಳಶಾಸ್ತ್ರ ಓದುತ್ತಿದ್ದು, ನನ್ನ ದಾಖಲಾತಿಯಲ್ಲಿ ಏಳನೇ ತರಗತಿಯವರೆಗೆ ನನ್ನ ಹೆಸರು ‘ಚನಬಸಪ್ಪ’ ಎಂದು ಇದ್ದು ಅದು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಅಂಕಪಟ್ಟಿಯಲ್ಲಿ ‘ಚನ್ನಬಸಪ್ಪ’ ಎಂದಾಗಿದೆ. ಹಾಗೂ ನನ್ನ ಹತ್ತನೇ, ಪಿ.ಯು.ಸಿ. ಅಂಕಪಟ್ಟಿಯಲ್ಲಿ ನನ್ನ ತಂದೆ-ತಾಯಿಯ ಹೆಸರು ಮಾತ್ರ ಇದ್ದು ಅದು ಬಿ.ಎ. ಅಂಕಪಟ್ಟಿಯಲ್ಲಿ ನನ್ನ ತಂದೆ-ತಾಯಿ ಹೆಸರಿನೊಂದಿಗೆ ಅಡ್ಡ ಹೆಸರು ಸೇರಿ ಬಂದಿದೆ.  ಎಂ.ಎಸ್ಸಿ ಅಂಕಪಟ್ಟಿಯಲ್ಲಿ ನಾನು ಹತ್ತನೇ ತರಗತಿಯಲ್ಲಿ ಇರುವಂತೆ ಅರ್ಜಿ ತುಂಬಿರುತ್ತೇನೆ.  ಇದನ್ನು ತಿದ್ದುಪಡಿ ಮಾಡಬೇಕೆ, ಇಲ್ಲದಿದ್ದರೆ ಮುಂದಿನ ನೌಕರಿಗೆ ತೊಂದರೆಯಾಗುತ್ತದೆಯೇ? 

ಚನ್ನಬಸಪ್ಪ ಶ ಉಪ್ಪಿನ, ಮಣಕವಾಡ

ನೀವು ತಿಳಿಸಿರುವ ಬದಲಾವಣೆಗಳನ್ನು ಮುಂಚೆಯೇ ಗಮನಿಸಬೇಕಿತ್ತು. ಹೆಸರನ್ನು ಸರಿಯಾಗಿ, ಪೂರ್ಣ ಹೆಸರು, ಅಂದರೆ ನಿಮ್ಮ ಮೊದಲ ಹೆಸರು (ಚೆನ್ನಬಸಪ್ಪ) ಸರ್‌ನೇಮ್‌ ಅಂದರೆ ತಂದೆ/ತಾತ/ಊರು – ಏನು, ಅದನ್ನು ನಿಮ್ಮ ಹೆಸರಿನ ಪಕ್ಕ, ಕೆಲವರು ಇನಿಷಿಯಲ್ಸ್‌ ಇಟ್ಟುಕೊಳ್ಳುತ್ತಾರೆ ಅದೆಲ್ಲವನ್ನೂ ಬದಲಾಯಿಸಲೇಬೇಕು.

ಈ ಕೆಳಕಂಡಂತೆ ಮಾಡಿ:

1. ಹೆಸರಾಂತ ನ್ಯೂಸ್‌ ಪೇಪರ್‌ನಲ್ಲಿ, ನಿಮ್ಮ ಹೆಸರು, ತಂದೆಯ ಹೆಸರು, ಪೂರ್ಣ ವಿಳಾಸ, ಜೊತೆಗೆ ಅವರ ಫಾರಂನಲ್ಲಿ ಭರ್ತಿಮಾಡಿ, ಜಾಹೀರಾತು ನೀಡಿ.

2. ನೀವು ಒಂದು ಅಫಿಡವಿಟ್‌, 1ನೇ ಕ್ಲಾಸ್‌ ಮ್ಯಾಜಿಸ್ಟ್ರೇಟ್‌/ ನೋಟರಿ/ ವಿತ್‌ ಕಮಿಷನರ್‌ಗೆ ನಿಮ್ಮ ಹೆಸರು, ತಂದೆಯ ಹೆಸರು, ಪೂರ್ಣ ವಿಳಾಸದ ಜೊತೆ, ಸಹಿ ಪಡೆಯಬೇಕು.

3. ನಿಮ್ಮ ಸ್ವಂತ ವಿವರ ಅಂದರೆ ನಿಮ್ಮ ಹೆಸರು (ಹಳೆಯದು ಮತ್ತು ಹೊಸದು) ತಂದೆಯ ಹೆಸರು ನಿಮ್ಮ ವಿದ್ಯಾರ್ಹತೆ, ಪೂರ್ಣವಿಳಾಸ, ಕೆಲಸದಲ್ಲಿದ್ದವರು ಕಂಪನಿಯ ಹೆಸರನ್ನು ಬರೆದು ಇಬ್ಬರು ಸಾಕ್ಷಿಗಳ ಮುಂದೆ ನೀವೂ ಸಹಿ ಮಾಡಿ, ಅವರ ಸಹಿ, ವಿಳಾಸ ಜೊತೆ ಪಡೆಯಬೇಕು.

4. ಪೇಪರ್‌ ಪ್ರಕಟಣೆಯ ಓರಿಜನಲ್‌, ಓರಿಜಿನಲ್‌ ಅಫಿಡವಿಟ್‌, ಓರಿಜನಲ್‌ ಡಿಕ್ಲರೇಷನ್‌ ಅಟೆಸ್ಟೆಡ್‌ ಅಫಿಡವಿಟ್‌, 2 ಹೊಸ ಭಾವಚಿತ್ರಗಳು, ಪ್ರಿಂಟಿಂಗ್‌ ಶುಲ್ಕ ಎಲ್ಲವನ್ನೂ ಕಂಟ್ರೋಲರ್‌ ಆಫ್‌ ಪಬ್ಲಿಕೇಷನ್‌, ಡಿರ್ಪಾಟ್‌ಮೆಂಟ್‌ ಆಫ್‌ ಪಬ್ಲಿಕೇಷನ್‌ ಆಫ್‌ ಕರ್ನಾಟಕ, ಇವರಿಗೆ ನೀವೇ ಖುದ್ದಾಗಿ ಹೋಗಿ ಹೆಸರು ಬದಲಾವಣೆಯ ಅರ್ಜಿಯನ್ನು ನಮೂದಿಸಬೇಕು. ಒಂದು ತಿಂಗಳ ನಂತರ ನಿಮಗೆ ದಾಖಲಾತಿಯನ್ನು ಕಳಿಸುತ್ತಾರೆ. ಇದು ನಿಮ್ಮ ಪರ್ಮನೆಂಟ್‌ ಐಡೆಂಟಿಟಿಯಾಗಿ ಉಳಿಯುತ್ತೆ. (ಹೊಸ ಬದಲಾದ ಹೆಸರಿನ ಜೊತೆ). ಮತ್ತೆ ತಪ್ಪು ಮಾಡಬೇಡಿ, ಹೆಸರು, ಇನಿಷಿಯಲ್‌ ಅಥವಾ ಸರ್‌ನೇಮ್‌ಗೆ, ತಂದೆ/ ತಾತ/ ಊರು ಖಚಿತ ಪಡಿಸಿಕೊಂಡು ಅರ್ಜಿ ಸಲ್ಲಿಸಿ, ಇದರಿಂದ ಮುಂದೆ ಉದ್ಯೋಗಕ್ಕೆ ಧಕ್ಕೆ ಬರುವುದಿಲ್ಲ.

2. ನಾನು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ವಾಣಿಜ್ಯ ವಿಭಾಗದಲ್ಲಿ ಇರುವ ವೃತ್ತಿಶಿಕ್ಷಣದ ಬಗ್ಗೆ ತಿಳಿಸಿಕೊಡಿ.

ಅಂಕಿತ, ಬಿಡದಿ

ನೀವು ಮುಂಚಿತವಾಗಿ ಪ್ಲಾನ್‌ ಮಾಡುತ್ತಿರುವುದು ಸಂತೋಷ. ವಿದ್ಯಾರ್ಥಿಗಳಿಗೆ ಪ್ಲಾನಿಂಗ್‌ ಬಹಳ ಮುಖ್ಯ. ನೀವು ಈ ಕೆಳಗಿನ ಕೋರ್ಸ್‌ಗಳನ್ನು ಆರಿಸಿಕೊಳ್ಳಬಹುದು.

1. ಬಿ.ಕಾಂ./ಎಂ.ಕಾಂ. ನಿಮಗೆ ಪ್ರಾಧ್ಯಾಪಕರಾಗಲು  ಆಸಕ್ತಿ ಇದ್ದಲ್ಲಿ ಈ ಮಾರ್ಗವನ್ನು ಆರಿಸಿ. ಎಂ.ಕಾಂ. ನಂತರ ಯುಜಿಸಿ ನೆಟ್‌ ಪರೀಕ್ಷೆಯನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬಹುದು.

2. ನಿಮ್ಮಲ್ಲಿ ನ್ಯೂಮರಿಕಲ್‌ ಎಬಿಲಿಟಿ (ಲೆಕ್ಕವನ್ನು ಚೆನ್ನಾಗಿ ಅರಿತು ಮಾಡುವ ಆಸಕ್ತಿ ಇದ್ದಲ್ಲಿ), ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಸುಲಭವಿದ್ದಲ್ಲಿ, ಸಿ.ಎ., ಸಿ.ಡಬ್ಲೂ.ಎ., ಕಂಪನಿ ಸೆಕ್ರೆಟರಿ ಕೋರ್ಸ್‌, ಬ್ಯಾಂಕಿಂಗ್‌ ಈ ಮಾರ್ಗವನ್ನು ಆರಿಸಬಹುದು.

3. ಮ್ಯಾನೇಜ್‌ಮೆಂಟ್‌ ಬಗ್ಗೆ ಆಸಕ್ತಿ ಇದ್ದಲ್ಲಿ, ಬಿ.ಬಿ.ಎಂ./ಎಂ.ಬಿ.ಎ., ಈ ಮಾರ್ಗದಲ್ಲಿ ಹೋಗಬಹುದು.

4. ಬಿ.ಕಾಂ. ನಂತರ ಕಂಪ್ಯೂಟರ್‌ ಲ್ಯಾಂಗ್ವೇಜ್‌ ಕಲಿತು ಉದ್ಯಮವನ್ನು ಆರಿಸಬಹುದು.

5. ಬಿ.ಕಾಂ., ನಂತರ ಕಮ್ಯೂನಿಕೇಶನ್‌ ಮ್ಯಾನೇಜ್‌ಮೆಂಟ್‌ ದಾರಿಯನ್ನು ನಿಮಗೆ ವರ್ಬಲ್‌ ಎಬಿಲಿಟಿ ಚೆನ್ನಾಗಿದ್ದಲ್ಲಿ ಆರಿಸಬಹುದು.

6. ‘ಲಾ’ ಮಾರ್ಗದಲ್ಲಿ ನಿಮ್ಮ ಆಸಕ್ತಿ ಇದ್ದರೆ, ರೀಸನಿಂಗ್‌ ಎಬಿಲಿಟಿ, ಅಂದರೆ ವಿಚಾರಾತ್ಮಕ ಬುದ್ಧಿ ಇದ್ದಲ್ಲಿ, ಆ ಕೋರ್ಸ್‌ಗಳನ್ನು ಆರಿಸಿ.

7. ಇವೆಂಟ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಅನ್ನು ಪ್ಲಾನ್‌ ಮಾಡಿ ಒಂದು ‘ಇವೆಂಟ್‌’ ಅನ್ನು ಎಷ್ಟು ಶಿಸ್ತಿನಿಂದ ಮಾಡಬಲ್ಲಿರಿ, ಜನಗಳ ಜೊತೆ ಸಂಪರ್ಕ, ವಿಷಯ ಸಂಗ್ರಹಣೆ, ಈ ಛಾತಿ ಇದ್ದಲ್ಲಿ ಈ ಮಾರ್ಗವನ್ನು ಆರಿಸಬಹುದು.

8. ಎಕನಾಮಿಕ್ಸ್‌ನಲ್ಲಿ ನಿಮ್ಮ ಆಸಕ್ತಿ ಮತ್ತು ಅರ್ಹತೆ ಇದ್ದಲ್ಲಿ, ಇನ್‌ಟಿಗ್ರೇಟೆಡ್‌ ಕೋರ್ಸ್‌ಗಳು, ಆಲ್‌ ಇಂಡಿಯಾ ಕಾಂಪಿಟೇಟಿವ್‌ ಪರೀಕ್ಷೆಗಳು, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌... ಈ ಹಾದಿಯಲ್ಲಿ ಹೋಗಬಹುದು.

ನೀವು ಯಾವುದೇ ಸ್ಕ್ರೀಮ್‌ ಅಂದರೆ ವಿಜ್ಞಾನ, ಆರ್ಟ್‌ ಅಥವಾ ವಾಣಿಜ್ಯ ಕ್ಷೇತ್ರದಿಂದ ಪದವೀಧರರಾದ ಮೇಲೆ ಸಿವಿಲ್‌ ಸರ್ವೀಸ್‌ ಪರೀಕ್ಷೆ (IAS, IPS, IFS)ಗಳನ್ನು ಬರೆಯಬಹುದು.

ಐಐಮ್‌, ಐಎಸ್‌ಬಿಗಳಲ್ಲಿ ಎಂಬಿಎ ಪದವಿ ಪಡೆಯಲೂ ಅರ್ಹತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry