‘ರೈತಪರ, ಬಡವರ ಪಕ್ಷ ಜೆಡಿಎಸ್’

6

‘ರೈತಪರ, ಬಡವರ ಪಕ್ಷ ಜೆಡಿಎಸ್’

Published:
Updated:

ಭಾಲ್ಕಿ: ‘ರೈತರ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜೆಡಿಎಸ್‌ ಅಭಿವೃದ್ಧಿ ಪರ ಪಕ್ಷವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಜನರು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಜನಾರ್ಧನ ಬಿರಾದರ ನುಡಿದರು.

ಪಟ್ಟಣದಲ್ಲಿ ಈಚೆಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬ ನಿಮಿತ್ತ ರೋಗಿಗಳಿಗೆ ಹಣ್ಣು, ಹಾಲು, ಬ್ರೇಡ್‌ ವಿತರಿಸಿ ಮಾತನಾಡಿದರು.

ಪ್ರಮುಖರಾದ ಸಿದ್ರಾಮಪ್ಪಾ ವಂಕೆ, ಮಲ್ಲಿಕಾರ್ಜುನ ನೇಳಗೆ, ಡಾ.ನಿತಿನ್ ಪಾಟೀಲ, ಸಂತೋಷ ಕಾಳೆ, ವಿಲಾಸರಾವ ಕನಸೆ, ವೈಜಿನಾಥ ತಗಾರೆ, ಸತೀಶ ಸೂರ್ಯವಂಶಿ, ಇಂದ್ರಜೀತ್‌ ವಾಡೇಕರ್‌, ರಾಜಕುಮಾರ ಭಟಾರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry