3

ಶಿವಮೊಗ್ಗ: ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

Published:
Updated:
ಶಿವಮೊಗ್ಗ: ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

ಶಿವಮೊಗ್ಗ: ಆಟೊದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಪೊಲೀಸರ ನೆರವಿನಿಂದ ವಾರಸುದಾರರಿಗೆ ತಲುಪಿಸುವ ಮೂಲಕ ಮಹಿಳೆ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೊದಲ್ಲಿ ಪ್ರಯಾಣಿಸುತ್ತಿದ್ದ ಸಮೀನಾಬಾನು 55 ಗ್ರಾಂ ಚಿನ್ನದ ಸರವನ್ನು ಮರೆತು ಹೋಗಿದ್ದರು. ಅದೇ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಆಶಾ, ಸರವನ್ನು ಗಮನಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಲುಪಿಸಿದ್ದರು.

ತುಂಗಾನಗರ ಠಾಣೆ ಪೊಲೀಸರು ಸರ ಕಳೆದುಕೊಂಡಿದ್ದ ಸಮೀನಾಬಾನು ಅವರನ್ನು ಪತ್ತೆ ಹಚ್ಚಿ ಆಶಾ ಅವರ ಮೂಲಕ ತಲುಪಿಸಿದ್ದಾರೆ. ಆಶಾ ಅವರ ಪ್ರಾಮಾಣಿಕತೆಗೆ ಮತ್ತು ಪೊಲೀಸರ ಸಹಕಾರಕ್ಕೆ ಸಮೀನಾಬಾನು ಕೃತಜ್ಞತೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry