7

ಉಡುಪಿ ಪರ್ಬ: ‘ಹೆಲಿ ಟೂರಿಸಂ’ಗೆ ಚಾಲನೆ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಉಡುಪಿ ಪರ್ಬ: ‘ಹೆಲಿ ಟೂರಿಸಂ’ಗೆ ಚಾಲನೆ

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ 29ರಿಂದ 31ರ ನಡೆಯಲಿರುವ ‘ಉಡುಪಿ ಪರ್ಬ’ದ ಅಂಗವಾಗಿ ನಗರದ ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ‘ಹೆಲಿ ಟೂರಿಸಂ’ಗೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಚಾಲನೆ ನೀಡಿದರು.

ಆ ನಂತರ ಮಾತನಾಡಿದ ಅವರು, ಉಡುಪಿಯಲ್ಲಿ ಕಾಡು, ಹಿನ್ನೀರು, ಸಮುದ್ರ ಹಾಗೂ ಪ್ರಸಿದ್ಧ ದೇವಾಲಯಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದಕ್ಕಿಂತ ಉತ್ತಮ ಅವಕಾಶ ಬೇರೆಲ್ಲೂ ಸಿಗುವುದಿಲ್ಲ. ಆದ್ದರಿಂದ ಗರಿಷ್ಠ ಮಟ್ಟದಲ್ಲಿ ಇವುಗಳನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿಯೇ ಹೆಲಿ ಟೂರಿಸಂಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಹೆಲಿಕಾಪ್ಟರ್ ಪ್ರಯಾಣ ಮಾಡಬೇಕು ಎಂಬುದು ಎಲ್ಲ ಜನರ ಆಸೆ ಆಗಿರುತ್ತದೆ. ಅಲ್ಲದೆ ವೈಮಾನಿಕ ನೋಟದಲ್ಲಿ ಊರು ಹೇಗೆ ಕಾಣುತ್ತದೆ ಎಂಬ ಕುತೂಹಲ ಸಹ ಇರುತ್ತದೆ. ಹೆಲಿ ಟೂರಿಸಂ ಮೂಲಕ ಬಯಕೆ ಈಡೇರಿಸಿಕೊಳ್ಳಬಹುದು. ಇದೇ 27ರ ವರೆಗೆ ಅವಕಾಶ ಇದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನವಾಗಿ ಹೆಲಿ ಟೂರಿಸಂ ಆರಂಭಿಸಲಾಗಿದೆ. ಇಲ್ಲಿರುವ ಸುಮಾರು 6 ಎಕರೆ ಜಾಗವನ್ನು ಸಹ ಪ್ರವಾಸೋದ್ಯಮ ಇಲಾಖೆ ಹೆಸರಿಗೆ ನೀಡಲಾಗಿದೆ. ಶಾಶ್ವತ ಹೆಲಿ ಟೂರಿಸಂ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಎಂಟು ನಿಮಿಷಗಳ ಪ್ರಯಾಣಕ್ಕೆ ₹2,500 ನಿಗದಿಪಡಿಸಲಾಗಿದೆ. ಸಾಹಸ ಯಾನಕ್ಕೆ ₹3,500 ಇದೆ. ವೈಮಾನಿಕ ಸ್ಟಂಟ್‌ಗಳನ್ನು ಮಾಡಲಾಗುತ್ತದೆ. 28ರಿಂದ ಕುಂದಾಪುರದಲ್ಲಿ ಹೆಲಿ ಟೂರಿಸಂ ಆರಂಭವಾಗಲಿದೆ.

ಸುಂದರ ಉಡುಪಿ ದರ್ಶನ

ಮುಖ್ಯಮಂತ್ರಿ ಅವರೊಂದಿಗೆ ಹಲವು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದೇನೆ. ವಿದೇಶಗಳಲ್ಲಿ ಸಹ ಹೆಲಿಕಾಪ್ಟರ್ ಮೂಲಕ ಪ್ರವಾಸಿ ತಾಣ ವೀಕ್ಷಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಹೆಲಿಕಾಪ್ಟರ್ ಮೂಲಕ ನೋಡುವ ಅವಕಾಶ ಸಿಕ್ಕಿತ್ತು. ಉಡುಪಿ, ಮಲ್ಪೆ ಮತ್ತು ಮಣಿಪಾಲ ತುಂಬಾ ಸುಂದರವಾಗಿ ಕಾಣಿಸಿತು. ಇದೊಂದು ಹೊಸ ಅನುಭವ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry