5

ವಿಜಯಪುರಕ್ಕೆ ತೆರಳಲು ಪರದಾಡಿದ ಪ್ರಯಾಣಿಕರು

Published:
Updated:

ಬಸವನಬಾಗೇವಾಡಿ: ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಖಂಡಿಸಿ ಶನಿವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ವಿಜಯಪುರ ಜಿಲ್ಲಾ ಬಂದ್‌ನಿಂದಾಗಿ ವಿಜಯಪುರಕ್ಕೆ ತೆರಳುವ ಪ್ರಯಾಣಿಕರು ಪರದಾಡಬೇಕಾಯಿತು.

ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದವು. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ ವಿಜಯಪುರ ಬಂದ್‌ನಿಂದಾಗಿ ತಾಳಿಕೋಟೆ, ಮುದ್ದೇಬಿಹಾಳ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ಜನರು ಕರ್ತವ್ಯ ಸೇರಿದಂತೆ ತುರ್ತು ಕಾರ್ಯಕ್ಕಾಗಿ ವಿಜಯಪುರಕ್ಕೆ ತೆರಳಬೇಕಾದ ಪ್ರಯಾಣಿಕರು ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪರದಾಡಿದರು. ತಾಳಿಕೋಟೆ, ಮುದ್ದೇಬಿಹಾಳ, ದೇವರಹಿಪ್ಪರಗಿ, ನಿಡಗುಂದಿ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಮಾರ್ಗದಿಂದ ಪಟ್ಟಣಕ್ಕೆ ಬಸ್ ಸಂಚಾರ ಎಂದಿನಂತೆ ಇತ್ತು.

ಪಟ್ಟಣದ ಬಸ್‌ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ವಿಜಯಪುರಕ್ಕೆ ತೆರಳುವ ಪ್ರಯಾಣಿಕರು ಬಸ್‌ ಸಂಚಾರ ಇಲ್ಲದೇ ಇರುವುದರಿಂದ ಖಾಸಗಿ ವಾಹನದಲ್ಲಿ ಹೆಚ್ಚಿನ ದರ ನೀಡಿ ವಿಜಯಪುರಕ್ಕೆ ಪ್ರಯಾಣ ಬೆಳೆಸುತ್ತಿರುವುದು ಸಾಮಾನ್ಯವಾಗಿತ್ತು. ವಿವಿಧ ಸಂಘಟನೆಗಳ ಸಭೆ ಕರೆದು ಒಂದೆರಡು ದಿನಗಳಲ್ಲಿ ಬಂದ್ ಕರೆ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಡಿಎಸ್ಎಸ್ ಮುಖಂಡರೊಬ್ದರು ತಿಳಿಸಿದರು.

ಕೊಲ್ಹಾರ ವರದಿ:

ಘಟನೆ ಖಂಡಿಸಿ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಉಪ ತಹಶೀಲ್ದಾರ ಕೆ.ವೈ.ಹೊಸಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಜಾವೀದ ಬಿಜಾಪೂರ. ಹಿಬ್ಜೂರಹಮಾನ್ ಕುಡಚಿ. ಸಾಜಿದ ಗಿರಗಾಂವಿ. ವಶೀಂ ಗಿರಗಾಂವಿ. ಮುನ್ನಾ ಕಮತಗಿ. ದಸ್ತಗೀರ ಬಾಗವಾನ. ಹಬೀಬ ಬಳಗಾರ. ಸಲೀಮ ಸಾರವಾಡ. ದಸ್ತಗೀರ ಕಾಖಂಡಕಿ. ಗುಲಾಬ ಪಕಾಲಿ. ಆರೀಪ ಸಾರವಾಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry