7

ಜೈಲು- ಸ್ಮರಣಶಕ್ತಿ!

Published:
Updated:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲೇ ಭಾಷಣ ಮಾಡಿದರೂ, ‘ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು’ ಎಂದು ಹಂಗಿಸುತ್ತಿರುತ್ತಾರೆ.

ಭಾರತದ ರಾಜಕಾರಣದಲ್ಲಿ ಜೈಲಿಗೆ ಹೋಗಿಬಂದ ರಾಜಕೀಯ ಮುಖಂಡರು, ಶಾಸಕರು, ಮಂತ್ರಿಗಳಿಗೇನೂ ಕೊರತೆ ಇಲ್ಲ. ಇಂದಿರಾ ಗಾಂಧಿಯವರೂ ಜೈಲಿಗೆ ಹೋಗಿ ಬಂದವರೇ. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ ಮತ್ತು ಜಯಲಲಿತಾ ಅವರೂ ಆರೋಪ ಹೊತ್ತು ಜೈಲಿಗೆ ಹೋದವರಲ್ಲವೇ? ಬಿಹಾರದಲ್ಲಿ ಕಾಂಗ್ರೆಸ್‍ ಮಿತ್ರಪಕ್ಷ ಆರ್.ಜೆ.ಡಿ. ಮುಖಂಡ ಲಾಲು ಪ್ರಸಾದ್, ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗಿಬಂದಿಲ್ಲವೇ? ಡಿ.23ರಂದು ಅವರನ್ನು ಪುನಃ ಬಂಧಿಸಲಾಗಿದೆ.

‘ನಮ್ಮ ಜನರಿಗೆ ನೆನಪಿನ ಶಕ್ತಿ ಕಡಿಮೆ’ ಎಂಬ ಮಾತಿದೆ. ಹಾಗಾಗಿ ಜನ ಮರೆತುಬಿಡಬಹುದು ಎಂಬ ಭಯದಿಂದಲೋ ಏನೋ, ನಮ್ಮ ಮುಖ್ಯಮಂತ್ರಿ ಪದೇ ಪದೇ ‘ಯಡಿಯೂರಪ್ಪ ಅವರು ಜೈಲಿಗೆ ಹೋದವರು’ ಎಂದು ನೆನಪಿಸುತ್ತಿರುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry