6

ಮನೆಗಳ ಮೇಲೆ ಮಿಣುಗುವ ನಕ್ಷತ್ರ

Published:
Updated:

ಮಾಲೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರೋಮನ್ ಕ್ಯಾಥೋಲಿಕ್ ಪಂಥದ ಕ್ರೈಸ್ತ ಧರ್ಮಿಯರು ಕ್ರಿಸ್‌ಮಸ್ ಹಬ್ಬದ ಅಂಗವಾಗಿ ತಮ್ಮ ಮನೆಗಳಲ್ಲಿ ಸಿದ್ಧತೆ ನಡೆಸಿಕೊಂಡಿದ್ದು, ಸಡಗರ ಸಂಭ್ರಮ ಮನೆ ಮಾಡಿದೆ.

ಕ್ಯಾಥೋಲಿಕ್ ಪಂಥಕ್ಕೆ ಸೇರಿದ ಸುಮಾರು 80 ಕುಟುಂಬಗಳು ಪಟ್ಟಣದ ಗುಡ್ನಹಳ್ಳಿ ರಸ್ತೆಯ ಬಳಿ ಒಂದು ಕಡೆ ನೆಲೆಸಿದ್ದು,  ಪ್ರಾರ್ಥನಾ ಮಂದಿರ (ಚರ್ಚ್)ನಿರ್ಮಾಣ ಮಾಡಿಕೊಂಡಿದ್ದಾರೆ.

ಪಟ್ಟಣದ ಎಲ್ಲ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪ್ರೊಟೆಸ್ಟೆಂಟ್ ಪಂಥಕ್ಕೆ ಸೇರಿದ ಸುಮಾರು 100 ರಿಂದ 150 ಕುಟುಂಬಗಳು ನೆಲೆಸಿವೆ. ಪ್ರೊಟೆಸ್ಟೆಂಟ್ ಪಂಥಕ್ಕೆ ಸೇರಿದವರು ಕ್ರಿಸ್‌ಮಸ್ ಹಬ್ಬದ ದಿನದಂದು ಮಾತ್ರ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುತ್ತಾರೆ. ಕ್ಯಾಥೋಲಿಕ್ ಪಂಥಕ್ಕೆ ಸೇರಿದ ಕ್ರೈಸ್ತರು ಕ್ರಿಸ್‌ಮಸ್ ಹಬ್ಬಕ್ಕೆ ಸುಮಾರು ಹದಿನೈದು ದಿನಗಳ ಮೊದಲೇ ಹಬ್ಬದ ಆಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವುದು ವಿಶೇಷ.

ಕ್ಯಾಥೋಲಿಕ್ ಪಂಥದಕ್ಕೆ ಸೇರಿದ ಕ್ರಿಶ್ಚಿಯನ್ ಕುಟುಂಬಗಳು ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕ್ರಿಸ್‌ಮಸ್‌ ಟ್ರೀ ನಿರ್ಮಾಣ ಮಾಡಿ ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ. ಮನೆಗಳ ಮೇಲೆ ಬಣ್ಣದ ಮಿನುಗುವ ದೊಡ್ಡ ನಕ್ಷತ್ರ ಸಹ ನೇತು ಹಾಕಿದ್ದಾರೆ. ಜೀಸಸ್ ಕ್ರೈಸ್ತ ಹಟ್ಟಿದ ಗೋದೂಳಿಯನ್ನು ನಿರ್ಮಿಸಲಾಗಿದೆ. ಅದರಲ್ಲಿ ರಾಗಿ , ಜೋಳ, ಸೇರಿದಂತೆ ವಿವಿಧ ಬೆಳೆಗಳ ಪೈರು ನಾಟಿ ಮಾಡಿ ನಿರ್ಮಿಸಿರುವ ಗೋದಳಿ ನೋಡುಗರನ್ನು

ಆಕರ್ಷಿಸುತ್ತಿದೆ.

‘ಕ್ರಿಸ್‌ಮಸ್‌ ಹಬ್ಬಕ್ಕೂ ಮೊದಲೇ ಫಾಧರ್ ಆರೋಗ್ಯಸ್ವಾಮಿ ಮತ್ತು ಅವರ ತಂಡ ಮನೆಗೆ ಆಗಮಿಸಿ ಪ್ರಾರ್ಥನೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ವಿವಿಧ ಭಕ್ಷ್ಯ ಭೋಜನಾ ನೀಡಿದೆವು’ ಎಂದು ಗ್ರೇಷ್ಯನ್ ಹಾಲ್ಮೇಡ ತಿಳಿಸಿದರು.

ಕ್ರಿಸ್ಮಸ್ ಹಬ್ಬದ ಅಂಗವಾಗಿ ಚರ್ಚ್‌ನ ಮುಂಭಾಗದಲ್ಲಿ ಜೀಸಸ್ ಕ್ರೈಸ್ತ ಹುಟ್ಟಿದ ಗೋದಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ರಿಸ್ಮಸ್ ಹಬ್ಬದಂದು ಕ್ರಿಶ್ಚಿಯನ್ನರು ಸೇರಿದಂತೆ ಬಹುತೇಕ ಎಲ್ಲ ಧರ್ಮಿಯರು ಚರ್ಚ್‌ಗೆ ಆಗಮಿಸಿ ದರ್ಶನ ಪಡೆಯುತ್ತಾರೆ ಎಂದು ಫಾಧರ್ ಆರೋಗ್ಯ ಸ್ವಾಮಿ  ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry