5

31ರಂದು ‘ಸಂಸ್ಕೃತ ವರ್ಷಾ’ ಜಿಲ್ಲಾ ಸಮ್ಮೇಳನ

Published:
Updated:

ಚಿಕ್ಕಮಗಳೂರು: ಸಂಸ್ಕೃತ ಭಾರತೀ ಜಿಲ್ಲಾ ಘಟಕದ ವತಿಯಿಂದ ಇದೇ 31ರಂದು ನಗರದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ‘ಸಂಸ್ಕೃತ ವರ್ಷಾ’ ಜಿಲ್ಲಾ ಸಂಸ್ಕೃತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ ಇಲ್ಲಿ ಬುಧವಾರ ತಿಳಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ನಿಕ್ ಅವರು ಬೆಳಿಗ್ಗೆ 9.30ಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಿಸುವರು. ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಉಪನ್ಯಾಸಕ ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 12.30ಕ್ಕೆ ‘ಸಂಸ್ಕೃತ ಹಾಗೂ ವಿಜ್ಞಾನ’ ವಿಷಯ ಕುರಿತು ಸಂವಾದ ನಡೆಯುವುದು. ಜೆವಿಎಸ್ ಮಹಿಳಾ ಪಿಯು ಕಾಲೇಜಿನ ಪ್ರಾಚಾರ್ಯೆ ತೇಜಸ್ವಿನಿ, ಸಂಸ್ಕೃತ ವಿದ್ವಾಂಸರಾದ ಹಿರೇಮಗಳೂರಿನ ವೈಷ್ಣವಸಿಂಹ, ಬೇಲೂರಿನ ವಿಶ್ವನಾಥಶರ್ಮ ಪಾಲ್ಗೊಳ್ಳುವರು ಎಂದರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯುವುದು. ಸಂಸ್ಕೃತ ಭಾರತೀ ಜಿಲ್ಲಾಘಟಕದ ಅಧ್ಯಕ್ಷ ನರೇಂದ್ರ ಪೈ ಅಧ್ಯಕ್ಷತೆ ವಹಿಸುವರು. ವಾಸವಿ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ದಿನೇಶ್ ಗುಪ್ತಾ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ಹಳುವಳ್ಳಿಯ ಕುಮಾರ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಸಂಸ್ಥೆ ಸಹ ಸಂಯೋಜಕ ಪ್ರಶಾಂತ್ ಶರ್ಮಾ, ಸದಸ್ಯಾರದ ನಾಗರಾಜ್, ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry