ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ದರ ಏರಿಕೆ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

Last Updated 28 ಡಿಸೆಂಬರ್ 2017, 13:51 IST
ಅಕ್ಷರ ಗಾತ್ರ

ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು ₹ 4ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಬಡವರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಒದಗಿಸುವ ‘ಉಜ್ವಲ’ ಯೋಜನೆಯ ಆಶಯಗಳಿಗೆ ಈ ನೀತಿ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ, ತೆರಿಗೆಯ ಕಾರಣಕ್ಕೆ ಸಬ್ಸಿಡಿ ಸಿಲಿಂಡರ್‌ಗಳ ಬೆಲೆ ಅಕ್ಟೋಬರ್ ನಂತರವೂ ಏರಿಕೆ ಆಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

2016ರ ಜೂನ್‌ನಿಂದ ಗೃಹ ಬಳಕೆ ಸಿಲಿಂಡ್ ಬೆಲೆಯನ್ನು ಪ್ರತಿ ತಿಂಗಳು ಹೆಚ್ಚಿಸಲು ತೈಲ ಕಂಪೆನಿಗಳಿಗೆ ಸರ್ಕಾರ ಈ ಹಿಂದೆ ಸೂಚಿಸಿತ್ತು. ಇದೇ ಅಕ್ಟೋಬರ್‌ನಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ. ಇದರಂತೆ ತೈಲ ಕಂಪೆನಿಗಳು ಅಕ್ಟೋಬರ್‌ನಿಂದ ಬೆಲೆ ಏರಿಕೆ ಮಾಡಿಲ್ಲ.

ಮೊದಲು ಪ್ರತಿ ತಿಂಗಳು ₹ 2 ಏರಿಸಲು ತಿಳಿಸಲಾಗಿತ್ತು. ನಂತರ, ಈ ವರ್ಷದ ಜೂನ್ 1ರಿಂದ ₹ 4 ಏರಿಸಲು ಆದೇಶಿಸಲಾಗಿತ್ತು. ಕಳೆದ 17 ತಿಂಗಳುಗಳಲ್ಲಿ ಸಬ್ಸಿಡಿ ಅಡುಗೆ ಅನಿಲದ ಬೆಲೆ ₹ 76.5 ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT