7

ಅಪಮಾನ ಯಾರಿಗೆ?

Published:
Updated:

ನಮ್ಮದೇಶದ ಸಂವಿಧಾನವನ್ನು ‘ಭಾರತದ ಸಂವಿಧಾನ’ ಎಂದು ಕರೆಯಲಾಗುತ್ತದೆ. ಸಂವಿಧಾನ ಪ್ರತಿಯ ಮೇಲೂ ‘ಭಾರತದ ಸಂವಿಧಾನ’ ಎಂದೇ ಬರೆಯಲಾಗಿದೆ. ಆದರೆ ಇತ್ತೀಚೆಗೆ ಕೆಲ ರಾಜಕೀಯ ವ್ಯಕ್ತಿಗಳು ಭಾರತದ ಸಂವಿಧಾನವನ್ನು ‘ಅಂಬೇಡ್ಕರ್ ಸಂವಿಧಾನ’ ಎಂದು ಬಿಂಬಿಸಲು ಆರಂಭಿಸಿದ್ದಾರೆ. ಇದು ಸರಿಯೇ?

ಡಾ.ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ಕಾರ್ಯ ಶ್ಲಾಘನೀಯ. ಹಾಗೆಂದು ಭಾರತ ಸಂವಿಧಾನವನ್ನು ಅಂಬೇಡ್ಕರ್ ಸಂವಿಧಾನ ಎಂದು ಕರೆಯುವುದು ಎಷ್ಟು ಸರಿ?

ಸಂವಿಧಾನ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನೀಡಿರುವ ಹೇಳಿಕೆ ಆಕ್ಷೇಪಾರ್ಹ. ಹಾಗೆಯೇ ಆ ಮಾತುಗಳ ಮೂಲಕ ‘ಹೆಗಡೆ ಅವರು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಸಹ ಸರಿಯಲ್ಲ. ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಭಾರತ ಸಂವಿಧಾನಕ್ಕೆ ಮಾಡಿದ ಅಪಮಾನ. ಸಂವಿಧಾನವನ್ನು ಭಾರತಿಯ

ರೆಲ್ಲರೂ ಗೌರವಿಸಬೇಕು. ಅದೆ ಭಾರತೀಯರ ಧರ್ಮ.

–ಚನ್ನಮನೆ ಸಿದ್ದರಾಜು, ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry