7

ಅರ್ಚಕರಿಗೆ ಗುರುತಿನ ಚೀಟಿ

Published:
Updated:

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮುಜರಾಯಿ ದೇಗುಲಗಳಲ್ಲಿ ಪೂಜಾರಿಕೆ ಮಾಡುತ್ತಿರುವ ಅರ್ಚಕರಿಗೆ ಜನವರಿ 1ರಂದು ತಾಲ್ಲೂಕು ಅರ್ಚಕರ ಸಮಾವೇಶದಲ್ಲಿ ಆರ್ಚಕರ ಗುರುತಿನ ಚೀಟಿ ನೀಡಲಾಗುವುದು ಎಂದು ತಾಲ್ಲೂಕು ಮುಜುರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಉಪಾಧ್ಯಕ್ಷ ಸಾಲ್ಕಟ್ಟೆ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಹಳೆಯೂರು ಆಂಜನೇಸ್ವಾಮಿ ದೇವಾಲಯದ ಆವರಣದಲ್ಲಿ ಈಚೆಗೆ ನಡೆದ ತಾಲ್ಲೂಕು ಮುಜುರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಭೆಯಲ್ಲಿ ಮಾತನಾಡಿ, ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯುವ ಸಭೆಯಲ್ಲಿ ತಹಶೀಲ್ದಾರ್‌ ಗುರುತಿನ ಚೀಟಿಯನ್ನು ವಿತರಿಸಲಿದ್ದು, ಸಂಘದ ವತಿಯಿಂದ 2018ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಅರ್ಚಕರ ಮತ್ತು ಆಗಮಿಕರ ಸಂಘದ ಸಂಘಟನಾ ಕಾರ್ಯದರ್ಶಿ ಎನ್.ಕೆ.ಗೋಪಿಕೃಷ್ಣ ಮಾತನಾಡಿ, ‘ಬೆಳಿಗ್ಗೆ 9ಗಂಟೆಗೆ ಪಟ್ಟಣದ ಶ್ರೀಆಂಜನೇಯ ಸ್ವಾಮಿ ದೇವಾಲಯದಿಂದ ಅರ್ಚಕರ ಮೆರವಣಿಗೆ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಮಸ್ವಾಮಿ, ನಿರ್ದೇಶಕರಾದ ಈಶ್ವರಪ್ಪ, ಕುಮಾರಯ್ಯ, ನಂದೀಶಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry