7

ಹೊಸ ತಾಲ್ಲೂಕು: ಜ.15ರ ನಂತರ ಕಾರ್ಯಾರಂಭ

Published:
Updated:

ಬಾಗಲಕೋಟೆ: ಹೊಸ ವರ್ಷದ ಮೊದಲ ದಿನ ಗುಳೇದಗುಡ್ಡ, ಇಳಕಲ್‌ ಹಾಗೂ ರಬಕವಿ–ಬನಹಟ್ಟಿ ಹೊಸ ತಾಲ್ಲೂಕು ಅಧಿಕೃತವಾಗಿ ಘೋಷಣೆಯಾಗುತ್ತಿಲ್ಲ. ಬದಲಿಗೆ 2018ರ ಜನವರಿ 15ರ ನಂತರ ಅಧಿಕೃತವಾಗಿ ಆಯಾ ತಾಲ್ಲೂಕು ಆಡಳಿತ ಕಾರ್ಯಾರಂಭ ಮಾಡಲಿದೆ.

‘ತಾಲ್ಲೂಕು ಕೇಂದ್ರ ಆರಂಭಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದರೂ, ಗುಳೇದಗುಡ್ಡ ತಾಲ್ಲೂಕು ರಚನೆ ಹಾಗೂ ವ್ಯಾಪ್ತಿ ನಿರ್ಧಾರಕ್ಕೆ ಸಾರ್ವಜನಿಕರ ಆಕ್ಷೇಪಣೆ ಕರೆದಿರುವ ದಿನಾಂಕ ಜನವರಿ 16ಕ್ಕೆ ಪೂರ್ಣಗೊಳ್ಳಲಿದೆ. ಹಾಗಾಗಿ ನಂತರ ತಾಲ್ಲೂಕು ಕೇಂದ್ರ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ’ ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಪ್ರಜಾವಾಣಿಗೆ ತಿಳಿಸಿದರು.

‘ಇಳಕಲ್‌ ತಾಲ್ಲೂಕಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ. ಆದರೆ ಆ ಬಗ್ಗೆ ಗೆಜೆಟ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ಹಾಗಾಗಿ ಹೊಸ ವರ್ಷದ ಮೊದಲ ದಿನ ಯಾವುದೇ ತಾಲ್ಲೂಕು ಕೇಂದ್ರ ಅಧಿಕೃತವಾಗಿ ಕಾರ್ಯಾರಂಭ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry