7

ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅಪಾರ

Published:
Updated:

ಶಿಗ್ಗಾವಿ: ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ, ಅನನ್ಯವಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ಎಚ್. ಹನಮಂತಪ್ಪ ಹೇಳಿದರು. ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ಶುಕ್ರವಾರ ಕುವೆಂಪು ಜನ್ಮದಿನ ಅಂಗವಾಗಿ ನಡೆದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವೈಚಾರಿಕ ನಿಲುವನ್ನು ಹೊಂದಿದ್ದ ಕವಿ ಕುವೆಂಪು ಅವರು ಮತ ಪಂಥಗಳಿಗೆ ಸಿಲುಕದೆ ಮಹಾ ಮಾನವನಾಗಿ ವಿಶ್ವ ಮಾನವನಾಗುವ ಸಂದೇಶವನ್ನು ಈ ನಾಡಿಗೆ ಸಾರಿದರು. ಅವರ ಬದುಕು ಬರಹ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.

ಕುವೆಂಪು ಮತ್ತು ವೈಚಾರಿಕತೆ ಕುರಿತು ಉಪನ್ಯಾಸ ನೀಡಿದ ಗ್ರಂಥಪಾಲಕಿ ಅನ್ನಪೂರ್ಣ ಪಾಟೀಲ ಮಾತನಾಡಿ, ಸಾಹಿತ್ಯದ ಉದ್ದಕ್ಕೂ ಮೌಢ್ಯತೆ ತೊಲಗಿಸಿ ವೈಚಾರಿಕತೆ ಬೆಳೆಸುವ ಸಾಹಿತ್ಯ ರಚಿಸಿದರು ಎಂದರು.

ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಜಿ.ಎಂ.ಅರಗೋಳ ಆಶಯ ನುಡಿ ನುಡಿದರು. ಮುಖ್ಯ ಶಿಕ್ಷಕ ಎ.ಕೆ.ಆದವಾನಿಮಠ, ಸಿ.ಟಿ.ಪಾಟೀಲ, ಎಂ.ಬಿ.ನಿರಲಗಿ, ಶಕುಂತಲಾ ಕೋಣನವರ, ಶಂಕರಗೌಡ್ರ ಪಾಟೀಲ, ಎಂ.ಎಸ್.ಕುರಂದವಾಡ, ಗೀತಾ ಸಾಲ್ಮನಿ, ಮಂಜುಳಾ, ಕೆ.ಸಿ.ಹೂಗಾರ ಇದ್ದರು. ಪ್ರೊ.ಕೆ.ಬಸಣ್ಣ ಸ್ವಾಗತಿಸಿದರು. ಸುಮಿತ್ರಾ ರಾಮಾಪುರಮಠ ನಿರೂಪಿಸಿದರು. ಪ್ರೊ.ಕೆ.ಎಸ್.ಬರದೆಲಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry