6

ಈ ವರ್ಷವೂ ಅಭಿವೃದ್ಧಿ ಚಾಲನೆಗೆ ಸೀಮಿತ

Published:
Updated:
ಈ ವರ್ಷವೂ ಅಭಿವೃದ್ಧಿ ಚಾಲನೆಗೆ ಸೀಮಿತ

ಯಾದಗಿರಿ: 2017 ಕಳೆದು 2018ನೇ ನೂತನ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಸಿಂಹಾವಲೋಕನ ನಡೆಸಿದರೆ ಈ ವರ್ಷವೂ ಅಭಿವೃದ್ಧಿ ಕೇವಲ ಚಾಲನೆಗೆ ಸೀಮಿತವಾಯಿತು ಅನ್ನಿಸುತ್ತದೆ. ಈ ವರ್ಷದಲ್ಲಿ ನಡೆದ ಪ್ರಮುಖ ಘಟನಾವಳಿಗಳು ಇಂತಿವೆ.

ಜನವರಿ

3: ಸೇನಾ ನೇಮಕಾತಿ ರ‍್ಯಾಲಿ.

5: ರಾಜ್ಯ 4ನೇ ಹಣಕಾಸು ಆಯೋಗದಿಂದ ಸಭೆ.

19: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮ್ಯಾಕ್ರೋ ಯೋಜನೆಯಡಿ ₹1.99 ಕೋಟಿ ವೆಚ್ಚದಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್- ನಂದೇಪಲ್ಲಿ 19 ಕಿಲೋ ಮೀಟರ್ ರಸ್ತೆ ಸುಧಾರಣೆ.

20: ₹5.48 ಕೋಟಿ ವೆಚ್ಚದಲ್ಲಿ ಯಾದಗಿರಿ ತಾಲ್ಲೂಕಿನ ಯರಗೋಳದಲ್ಲಿ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಲೋಕಾರ್ಪಣೆ.

21: ಆರ್‌ಐಡಿಎಫ್ ಯೋಜನೆಯಡಿ ಹತ್ತಿಕುಣಿ ಗ್ರಾಮದಲ್ಲಿ ₹60 ಲಕ್ಷ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣ.

ಫೆಬ್ರುವರಿ

4: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಜಿಲ್ಲಾಡಳಿತ ಭವನ ಉದ್ಘಾಟನೆ. ವಿವಿಧ ಇಲಾಖೆ 32 ಕಾಮಗಾರಿ ಶಂಕುಸ್ಥಾಪನೆ. ಸುರಪುರದಲ್ಲಿ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ.

22: ತಾಲ್ಲೂಕಿನ ರಾಮಸಮುದ್ರ ಬಳಿ ಭೀಕರ ಅಫಘಾತದಲ್ಲಿ 9 ಜನರ ಸಾವು.

25: ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಅವರಿಂದ 6 ನೂತನ ಬಸ್‌ ಸಂಚಾರಕ್ಕೆ ಚಾಲನೆ ನೀಡಲಾಯಿತು.

24: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಭಾರತ ಭಾಗ್ಯವಿಧಾತ ಧ್ವನಿ-ಬೆಳಕು ದೃಶ್ಯ ವೈಭವ ರೂಪಕಗಳ ಸಮಾರಂಭ

18: ರಾಜ್ಯ ಮಟ್ಟದ ಪುಸ್ತಕ ಜಾತ್ರೆ, ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ ನಡೆಯಿತು.

ಮಾರ್ಚ್‌

4: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಸುರಪುರ ನೂತನ ಬಸ್ ನಿಲ್ದಾಣ ಉದ್ಘಾಟನೆ.

6: ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ; ಲೋಕಾಯುಕ್ತ ನ್ಯಾಯಾಧೀಶ ಪಿ.ವಿಶ್ವನಾಥ ಶೆಟ್ಟಿ ಭಾಗಿ.

25: ಕರ್ನಾಟಕ ಏಕೀರಣದ 60 ವರ್ಷಗಳ ಸಂಭ್ರಮಾಚರಣೆ ಅಭಿನಂದನಾ ಸಮಾರಂಭ.

ಏಪ್ರಿಲ್

1: ₹1,721 ಕೋಟಿ ಬರ ಪರಿಹಾರ ಮಂಜೂರು: ಕಾಗೋಡು

2: ಬರ ನಿರ್ವಹಣಾ ಅಧಿಕಾರಿಗಳ ಮಹತ್ವದ ಸಭೆ; ಕಾಗೋಡು ಭಾಗಿ

7: ಜನಾಕರ್ಷಣೆ ಗಳಿಸಿದ ಮ್ಯಾರಾಥಾನ್ ಓಟ

ಮೇ

11: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದ ಯಾದಗಿರಿ ನಗರ ಸಾರಿಗೆ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ

12: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರೊಂದಿಗೆ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ‘ಜನ-ಮನ’ ಎಂದು ಸಂವಾದ.

15: ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ

ಜೂನ್‌

3: ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯಭಾಸ್ಕರ್ ಅವರಿಂದ ಜಿಲ್ಲೆಯ ವಿವಿಧೆಡೆ ಭೇಟಿ.

ಜುಲೈ

5: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ.

ಆಗಸ್ಟ್

3: 2017–18ನೇ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಯಾದಗಿರಿ ತಾಲ್ಲೂಕಿನ 35 ಕೆರೆಗಳಿಗೆ ₹440 ಕೋಟಿ ವೆಚ್ಚಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಣೆ.

13: ವಿಶ್ವಗಂಗು ಟ್ರೆಸ್ಟ್ ವತಿಯಿಂದ ನಗೆಹಬ್ಬ

15: ಯಾದಗಿರಿ ಜಿಲ್ಲೆಯ ಕಡೇಚೂರು-

ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ

ವಾರ್ಷಿಕ ₹600 ಬೋಗಿ ಫ್ರೇಮ್ ಉತ್ಪಾದನಾ ಸಾಮರ್ಥ್ಯದ ರೈಲು ಬೋಗಿ ನಿರ್ಮಾಣ ಕಾರ್ಖಾನೆ ಲೋಕಾರ್ಪಣೆ.

ಸೆಪ್ಟೆಂಬರ್

12: ದಸರಾ ಕ್ರೀಡಾಕೂಟ

15: ಜಿಲ್ಲಾಡಳಿತ, ಟಾಟಾ ಟ್ರಸ್ಟ್ ನಡುವೆ ₹46 ಕೋಟಿ ಅಭಿವೃದ್ಧಿ ಒಡಂಬಡಿಕೆಗೆ ಸಹಿ

21: ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿ ಆರಂಭ

28: ಗೌಡಗೇರಾ ಗ್ರಾಮದಲ್ಲಿ ಸಿಡಿಲು ಬಡಿದು 4 ಜನರ ಸಾವು

ಅಕ್ಬೋಬರ್

2: ಮಾತೃಪೂರ್ಣ ಯೋಜನೆಗೆ ಚಾಲನೆ

10: ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್‌ನ ಸದಸ್ಯರಿಗೆ ನಾಯಕತ್ವದ ತರಬೇತಿ ಶಿಬಿರ

22: ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ ಮತ್ತು 104 ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನೆ

ನವೆಂಬರ್

1: ರಾಜ್ಯೋತ್ಸವ ಪ್ರಶಸ್ತಿಗೆ ಕಲಾವಿದೆ ಶರಣಮ್ಮ ಮ್ಯಾಗೇರಿ ಆಯ್ಕೆ

14: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 10 ಎಕರೆ ಜಮೀನು ಮಂಜೂರು

15: ಕನ್ನಡದಲ್ಲಿ ಕುರ್‌ಆನ್ ಪ್ರವಚನ

21: ಜಿಲ್ಲಾಮಟ್ಟದ ಯುವಜನೋತ್ಸವ

22: ಲುಂಬಿನಿ ವನೋತ್ಸವ

24: ಮರಕ್ಕೆ ಕಟ್ಟಿ ವ್ಯಕ್ತಿ ಕೊಲೆ

26: ಜಿಲ್ಲಾಮಟ್ಟದ ಶಾಂತಿ ಸಮ್ಮೇಳನ

27: ಸ್ವ ಉದ್ಯೋಗ ಮತ್ತು ತರಬೇತಿ ಉದ್ಯೋಗ ಮೇಳ

28: ಜಿಲ್ಲಾಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನ

ಡಿಸೆಂಬರ್

1: ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ಬಿ+ ಮಾನ್ಯತೆ

2: ಚರ್ಮವಾದ್ಯಗಳ ಕಲಾವಿದರ ಸಮಾವೇಶ, ಜಾನಪದ ಸಂಭ್ರಮ

6: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಾರೆಪ್ಪ ಭೇಟಿ

9: ಗುರುಮಠಕಲ್‌ನಲ್ಲಿ ಬಿಜೆಪಿ ಪರಿವರ್ತನಾ ರ‍್ಯಾಲಿ

11: ಬಿಜೆಪಿ ವತಿಯಿಂದ ನವ ಕರ್ನಾಟ ನಿರ್ಮಾಣದ ಪರಿವರ್ತನಾ ಯಾತ್ರೆ

12: ಶ್ರೀರಾಮ ಸೇನೆ ವತಿಯಿಂದ ವಿರಾಟ್‌ ಹಿಂದೂ ಸಮಾವೇಶ

13: ನನ್ನ ಕನಸಿನ ಕರ್ನಾಟಕ ಸಮಾವೇಶ

17: ಹುಣಸಗಿಯಲ್ಲಿ ₹109 ಕೋಟಿ ವೆಚ್ಚದಲ್ಲಿ, ಗುರುಮಠಕಲ್‌ನಲ್ಲಿ ₹440 ಕೋಟಿ ವೆಚ್ಚದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ.

24: ವನವಾಸಿ ಕಲ್ಯಾಣ ಕರ್ನಾಟಕ ಪ್ರಥಮ ಜಿಲ್ಲಾ ಸಮ್ಮೇಳನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry