7
ಕುಶಾಲನಗರದ ತೆಲುಗು ಶೆಟ್ಟರ ಸಂಘದಿಂದ ಪ್ರತಿಭಟನೆ

ಕಾವೇರಿ ತಾಲ್ಲೂಕು ರಚನೆಗೆ ಆಗ್ರಹ

Published:
Updated:

ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಮೂರನೇ ಹಂತದ ಹೋರಾಟ ಶನಿವಾರಕ್ಕೆ 8 ದಿನಗಳನ್ನು ಪೂರೈಸಿದೆ.

ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿಯಲ್ಲಿ ತೆಲುಗು ಶೆಟ್ಟರ ಕ್ಷೇಮಾಭಿವೃದ್ಧಿ ಸಮಾಜದ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

‌ತಾಲ್ಲೂಕು ರಚನೆ ಪರ ಘೋಷಣೆ ಕೂಗಿದರು. ಎಲ್ಲಾ ಅರ್ಹತೆಗಳಿದ್ದರೂ ಕುಶಾಲನಗರವನ್ನು ಕಡೆಗಣಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಶ್ರೀ ಗಣಪತಿ ದೇವಾಲಯ ಎದುರು ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆದು ಪ್ರತಿಭಟಿಸಲಾಯಿತು.

ಸಮಾಜದ ಅಧ್ಯಕ್ಷ ಎಚ್.ಆರ್. ಮಂಜುನಾಥ, ಕಾರ್ಯದರ್ಶಿ ಎಚ್.ವಿ. ಪ್ರಕಾಶ, ಪದಾಧಿಕಾರಿಗಳಾದ ಶಿವಲಿಂಗ ಶೆಟ್ಟಿ, ಕಾಶಿ, ಕಾಮತರಾಜ ಶೆಟ್ಟಿ, ಪುಟ್ಟಣ್ಣಯ್ಯ ಶೆಟ್ಟಿ, ಮಾದೇವ ಶೆಟ್ಟಿ, ರಂಗಶೆಟ್ಟಿ, ಗೋವಿಂದರಾಜ ಶೆಟ್ಟಿ, ಬಲರಾಜು ಶೆಟ್ಟಿ, ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry