ಅಖಿಲ ಅಮ್ಮಕೊಡವ , ಕೊಡವ ಸಮಾಜದಿಂದ ಧರಣಿ

7

ಅಖಿಲ ಅಮ್ಮಕೊಡವ , ಕೊಡವ ಸಮಾಜದಿಂದ ಧರಣಿ

Published:
Updated:

ಗೋಣಿಕೊಪ್ಪಲು: ಅಖಿಲ ಅಮ್ಮಕೊಡವ ಮತ್ತು ಕೊಡವ ಸಮಾಜದ ವತಿಯಿಂದ ಭಾನುವಾರ ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ ಧರಣಿ ನಡೆಸಲಾಯಿತು.

ಕೊಡವ ಸಾಂಪ್ರದಾಯಕ ಉಡುಪಿನಲ್ಲಿ ಆಗಮಿಸಿದ ಪ್ರತಿಭಟನಾ ಕಾರರು ಗಾಂಧಿ ಮಂಟಪದ ಬಳಿ ಕುಳಿತು ಧರಣಿ ನಡೆಸುವ ಮೂಲಕ ನೂತನ ತಾಲ್ಲೂಕು ರಚನೆಗೆ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ವಿಧಾನ ಪರಿಷತ್‌ನಲ್ಲಿ ತಾಲ್ಲೂಕು ರಚನೆಗೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ. ಅವರಿಗೆ ಎಲ್ಲರೂ ಬೆಂಬಲ ಸೂಚಿಸಬೇಕು. ನೂತನ ತಾಲ್ಲೂಕು ರಚನೆ ಆಗಲೇ ಬೇಕು ಎಂದು ಸ್ಥಳೀಯ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ ಒತ್ತಾಯಿಸಿದರು.

ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಮ್ಮತ್ತೀರ ಕೃಷ್ಣಕುಮಾರ್, ಜಿ.ಪಂ.ಸದಸ್ಯ ಬಾನಂಡ ಪೃಥ್ಯು, ಅಡ್ಡಂಡ ಅನಿತಾ ಕಾರ್ಯಪ್ಪ, ವಕೀಲ ಮತ್ರಂಡ ಅಪ್ಪಚ್ಚು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry