ಹೊಸ ಪಕ್ಷದ ಸದೃಢತೆಗೆ ವೆಬ್‌ಸೈಟ್, ಮೊಬೈಲ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ರಜನಿ

7
ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಲು ಮನವಿ

ಹೊಸ ಪಕ್ಷದ ಸದೃಢತೆಗೆ ವೆಬ್‌ಸೈಟ್, ಮೊಬೈಲ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ರಜನಿ

Published:
Updated:
ಹೊಸ ಪಕ್ಷದ ಸದೃಢತೆಗೆ ವೆಬ್‌ಸೈಟ್, ಮೊಬೈಲ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ ರಜನಿ

ಚೆನ್ನೈ: ತಮಿಳು ನಟ ರಜನೀಕಾಂತ್ ಅವರು ತಮ್ಮ ಹೊಸ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಜನರಿಗೆ ದಾಟಿಸುವ ಸಲುವಾಗಿ ವೆಬ್‌ ಸೈಟ್ ಹಾಗೂ ಮೊಬೈಲ್‌ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ.

ತಮಿಳುನಾಡು ಜನತೆ ಈ ಎರಡು ಮಾಧ್ಯಮಗಳನ್ನು ಬಳಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಬೇಕೆಂದು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊ ಮೂಲಕ ರಜನೀಕಾಂತ್ ಮನವಿ ಮಾಡಿದ್ದಾರೆ.

ನಾನು ಹೊಸದಾಗಿ ರಚಿಸುತ್ತಿರುವ ಪಕ್ಷದ ಪರವಾಗಿ ವೆಬ್‌ಸೈಟ್ ರಚಿಸಿದ್ದೇನೆ. ಈ ಮಾಧ್ಯಮದ ಮೂಲಕ ನಿಮ್ಮೆಲ್ಲರನ್ನೂ ಒಂದುಗೂಡಿಸುವ ಪ್ರಯತ್ನವಿದು. ಹಾಗಾಗಿ ಪ್ರತಿಯೊಬ್ಬರು ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry