ಬ್ರೆಜಿಲ್: ಜೈಲಿನಲ್ಲಿ ಕೈದಿಗಳ ಜಗಳ; 9 ಸಾವು

7

ಬ್ರೆಜಿಲ್: ಜೈಲಿನಲ್ಲಿ ಕೈದಿಗಳ ಜಗಳ; 9 ಸಾವು

Published:
Updated:
ಬ್ರೆಜಿಲ್: ಜೈಲಿನಲ್ಲಿ ಕೈದಿಗಳ ಜಗಳ; 9 ಸಾವು

ಸವೊ ಪೌಲೊ (ಬ್ರೆಜಿಲ್): ಇಲ್ಲಿನ ಅಪರೆಸಿ ಡಿ ಗೊಯಾನಿಯಾ ಕಾಂಪ್ಲೆಕ್ಸ್ ನಲ್ಲಿರುವ ಕಲೊನಿಯಾ ಅಗ್ರೊಇಂಡಸ್ಟ್ರಿಯಲ್ ಜೈಲಿನಲ್ಲಿ ಕೈದಿಗಳ ನಡುವೆಯುಂಟಾದ ಜಗಳದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಸೋಮವಾರ ತಡರಾತ್ರಿ ನಡೆದ ಈ ಜಗಳದಲ್ಲಿ 14 ಮಂದಿಗೆ ಗಾಯಗಳಾಗಿವೆ ಎಂದು ಬ್ರೆಜಿಲ್ ಸುದ್ದಿ ತಾಣ ಜಿ1 ವರದಿ ಮಾಡಿದೆ.

ಕೈದಿಯೊಬ್ಬ ವಿರುದ್ಧ ಗುಂಪಿನ ಮೂವರು ಕೈದಿಗಳ ಮೇಲೆ ದಾಳಿ ನಡೆಸಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಗಳ ತಾರಕಕ್ಕೇರಿದಾಗ ಅಲ್ಲಿರುವ ಹಾಸಿಗೆಗೆ ಬೆಂಕಿ ಹಚ್ಚಲಾಗಿದೆ. ಈ ಬೆಂಕಿ ಪಕ್ಕದ ಸೆಲ್‍ಗೂ ಹರಡಿದ್ದು, ಅಲ್ಲಿರುವ ಕೈದಿಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.

ಜೈಲಿನಲ್ಲಿ ಸಂಘರ್ಷ ನಡೆಯುತ್ತಿದ್ದ ವೇಳೆ 106 ಕೈದಿಗಳು ಪರಾರಿಯಾಗಲು ಯತ್ನಿಲಿದ್ದು, 29 ಕೈದಿಗಳನ್ನು ಜೈಲು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ ಎಂದು ಬ್ರೆಜಿಲ್‍ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry