ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಡಿ. 25ರಂದು ನಡೆಯಲಿರುವ ಸುಬ್ರಹ್ಮಣ್ಯ ರಥೋತ್ಸವ ಸಿದ್ಧತೆ ಭರದಿಂದ ನಡೆದಿದೆ.

ರಥೋತ್ಸವದಂದು ಪ್ರತಃಕಾಲ 2 ಗಂಟೆಗೆ ದೇವಾಲಯ ತೆರೆಯಲಾಗುತ್ತದೆ. 2.30ಕ್ಕೆ ಅಭಿಷೇಕ ಪ್ರಾರಂಭವಾಗಿ ಬೆಳಿಗ್ಗೆ 4.30ಕ್ಕೆ ಮಂಗಳಾರತಿ ನಡೆಯಲಿದೆ.
ಬೆಳಗೆ 5 ರಿಂದ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 6 ಗಂಟೆಯಿಂದ ಭಕ್ತಾದಿಗಳಿಗಾಗಿ ಧರ್ಮದರ್ಶನ ಮತ್ತು ₹50ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಉಚಿತ ಬಸ್: ರಥೋತ್ಸವ ದಿನದಂದು ಬರುವ ಭಕ್ತಾದಿಗಳಿಗಾಗಿ ದೊಡ್ಡಬಳ್ಳಾಪುರದ ಸಮೀಪದ ಕಂಟನಕುಂಟೆಯಿಂದ 15 ಮತ್ತು ಮಾಕಳಿಯಿಂದ 10 ಉಚಿತ ಕೆಎಸ್ಆರ್ಟಿಸಿ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. 4 ಮತ್ತು 2 ಚಕ್ರದ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಜನವರಿ 1 ರಿಂದ 31 ರವರಗೆ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ.

ಸಂಚಾರ ಸುಗಮ ವ್ಯವಸ್ಥೆಗಾಗಿ ಸುಮಾರು 700 ಪೋಲಿಸ್ ಸಿಬ್ಬಂದಿ ಮತ್ತು 200 ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗಿದೆ. ಸರಗಳ್ಳತನ, ಜೇಬುಗಳ್ಳತನ ಹಾಗೂ ಯಾವುದೇ ಅವಘಡ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ಷೇತ್ರದ 1 ಕಿ.ಮೀ ಸುತ್ತಳತೆಯಲ್ಲಿ ಸುಮಾರು 80 ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ.

ತುರ್ತು ಸೇವೆಗಾಗಿ 3 ಅಂಬುಲೆನ್ಸ್ ಮತ್ತು ಆರೋಗ್ಯ ಇಲಾಖೆ ತಂಡವನ್ನು ಹಾಗೂ ಅಗ್ನಿ ಶಾಮಕ ವಾಹನದ ವ್ಯವಸ್ಥೆ ಮಾಡಲಾಗಿದೆ. ಡಿ. 23ರಿಂದ 28 ರವರೆಗೆ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರು, ಗರ್ಭಿಣಿಯರಿಗೆ ನೇರ ದರ್ಶನ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.