ದೊಡ್ಡಬಳ್ಳಾಪುರ: 2018 ಹೊಸ ವರ್ಷ ತಾಲ್ಲೂಕಿನಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಹೊಸ ವರ್ಷದ ಅಂಗವಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು. ನಗರದ ಟಿ.ಬಿ.ವೃತ್ತದ ಬಳಿಯಿರುವ ಸೆಂಟ್ ಪೀಟರ್ಸ್ ಚರ್ಚ್‌ನಲ್ಲಿ ಹೊಸ ವರ್ಷದ ಅಂಗವಾಗಿ ವಿಶೇಷ ಪ್ರಾರ್ಥನೆ ನಡೆಯಿತು. ಫಾದರ್ ಚಾಕೋ.ಕೆ.ಸಿ ಪ್ರವಚನ ನೀಡಿದರು.

ನಗರದ ಡಿ.ಕ್ರಾಸ್ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದ ಅಂಗವಾಗಿ, ನವಗ್ರಹ ರಂಗೋಲಿ ಹಾಗೂ ವಿಗ್ರಹಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು.

ನಗರದ ಕುಚ್ಚಪ್ಪನಪೇಟೆಯಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ರುಮಾಲೆ ವೃತ್ತದ ಗಣಪತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು. ಅಂಗಡಿ ಮುಗ್ಗಟ್ಟುಗಳಿಗೆ ವಿಶೇಷ ದೀಪಾಲಂಕಾರ. ಕೇಕ್ ಕತ್ತರಿಸುವ ಮೂಲಕ ವರ್ಷಾಚರಣೆ ಆಚರಣೆ, ಪರಸ್ಪರ ಶುಭಾಶಯಗಳ ವಿನಿಮಯ ಎಲ್ಲಡೆ ಕಂಡು ಬಂದಿತು.

ಜನತೆ ಮಧ್ಯ ರಾತ್ರಿ ಕಳೆದು ಹೊಸ ವರ್ಷದ ವೇಳೆಯಾಗುತ್ತಿರುವಂತೆಯೇ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಕೇಕ್‌ಗಳನ್ನು ಕತ್ತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳ ಮುಂದೆ ಹೊಸ ವರ್ಷದ ಶುಭ ಕೋರುವ ರಂಗೋಲಿಗಳು ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.