ಲಂಡನ್: ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾದರೂ ಜಗತ್ತಿನ ಕಾಲುಭಾಗ ಭೂಮಿ ಒಣಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ, ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳ ಸಂಶೋಧಕರು 27 ಜಾಗತಿಕ ಹವಾಮಾನ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ವಿಜ್ಞಾನಿಗಳ ಈ ತಂಡದಲ್ಲಿ ಭಾರತದ ವಿಜ್ಞಾನಿ ಮನೋಜ್ ಜೋಷಿ ಇದ್ದಾರೆ.

ಹವಾಮಾನ ವೈಪರಿತ್ಯದಿಂದ ಆಗುವ ಈ ಬದಲಾವಣೆಯು ಬರಗಾಲ ಹಾಗೂ ಕಾಳ್ಗಿಚ್ಚಿಗೆ ಕಾರಣವಾಗಲಿದೆ. ಆದರೆ ಸರಾಸರಿ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಿದರೂ ಸಾಕು ಇಂತಹ ವಿಪ್ಲವಗಳಿಂದ ಭೂಮಿಯನ್ನು ರಕ್ಷಿಸಬಹುದು. ಸದ್ಯ ಜಾಗತಿಕ ತಾಪಮಾನವು ಸರಾಸರಿಗಿಂತ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ.

ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಕೆಲ ಭಾಗಗಳ ತೇವಾಂಶದಲ್ಲಿ ಬದಲಾವಣೆಯಾಗುತ್ತಿರುವುದನ್ನು ಗುರುತಿಸಲಾಗಿದೆ. ಭೂಮಿಯ ಮೇಲ್ಮೈ ಒಣಗುವಿಕೆಯನ್ನು ಶುಷ್ಕತೆ ಮೂಲಕ ಅಳೆಯಲಾಗುತ್ತದೆ. ಇದರಲ್ಲಿ ಮಳೆ ಹಾಗೂ ನೀರು ಆವಿಯಾಗುವ ಪ್ರಮಾಣಗಳೂ ಸೇರಿವೆ.

‘20ನೇ ಶತಮಾನದಲ್ಲಿ ಮೆಡಿಟರೇನಿಯನ್, ಆಫ್ರಿಕಾದ ದಕ್ಷಿಣ ಭಾಗ ಮತ್ತು ಆಸ್ಟ್ರೇಲಿಯಾದ ಪೂರ್ವ ಕರಾವಳಿಯು ತೀವ್ರ ಬರದ ಭೀತಿಯನ್ನು ಎದುರಿಸಿವೆ. ಅರೆ–ಶುಷ್ಕ ವಾತಾವರಣ ಇರುವ ಮೆಕ್ಸಿಕೊ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಕೆಲ ಭಾಗಗಳು ತಾಪಮಾನ ಏರಿಕೆಯಾದ ವೇಳೆ ಸಂಕಷ್ಟ ಎದುರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.