ಗುರುವಾರ , ಜೂಲೈ 9, 2020
27 °C

ಲೈಂಗಿಕ ದೌರ್ಜನ್ಯ ಆರೋಪ ಗಜಲ್ ಗಾಯಕ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ರೇಡಿಯೊ ಜಾಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೆಲುಗಿನ ಗಜಲ್ ಗಾಯಕ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ.

ಸಂತ್ರಸ್ತೆ, ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್‌ 354 (ಗೌರವಕ್ಕೆ ದಕ್ಕೆ ತರುವ ಉದ್ದೇಶದಿಂದ ಹಲ್ಲೆ), 354ಡಿ (ಚುಡಾಯಿಸುವುದು) ಹಾಗೂ 509 (ಮಹಿಳೆಯರಿಗೆ ಅಪಮಾನ ಮಾಡುವ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಶ್ರೀನಿವಾಸ್ ಅವರು ಬಲವಂತವಾಗಿ ತನ್ನಿಂದ ಮಸಾಜ್ ಮಾಡಿಸಿಕೊಂಡಿದ್ದ ವಿಡಿಯೊ ಹಾಗೂ ಕಳೆದ ಒಂಬತ್ತು ತಿಂಗಳಿಂದ ದೂರವಾಣಿಯಲ್ಲಿ ನಡೆದ ಸಂಭಾಷಣೆಯ ದಾಖಲೆ ಸಹಿತ ಸಂತ್ರಸ್ತೆ ಡಿಸೆಂಬರ್ 29ರಂದು ದೂರು ನೀಡಿದ್ದರು. ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಮಂಗಳವಾರ ಬೆಳಿಗ್ಗೆ ಅವರನ್ನು ಬಂಧಿಸಲಾಗಿದೆ’ ಎಂದು ಪಂಜಗುಟ್ಟ ಸಹಾಯಕ ಪೊಲೀಸ್ ಆಯುಕ್ತ ವಿಜಯ್‌ಕುಮಾರ್ ತಿಳಿಸಿದ್ದಾರೆ.

ಶ್ರೀನಿವಾಸ್ ನೇತೃತ್ವದ ಸೇವ್ ಟೆಂಪಲ್ ಚಳವಳಿಯ ಸಿಬ್ಬಂದಿ ಪಾರ್ವತಿ ಅವರು, ಶ್ರೀನಿವಾಸ್ ಜತೆ ಆಪ್ತವಾಗಿರುವಂತೆ ಸಂತ್ರಸ್ತೆಗೆ ಒತ್ತಾಯಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

‘ನಾನು ಮುಗ್ಧ. ವೈದ್ಯರು ಬಾರದ ಕಾರಣ ಅವರು ತಾವಾಗಿಯೇ ನನಗೆ ಮಸಾಜ್ ಮಾಡುವುದಾಗಿ ಹೇಳಿದರು. ಅವರು ನಮ್ಮ ಸಿಬ್ಬಂದಿಯೇ ಆಗಿದ್ದರಿಂದ ನಾನು ಒಪ್ಪಿಕೊಂಡೆ. ಅವರು ನನ್ನ ಮಗಳಿದ್ದಂತೆ’ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.