ಗುರುವಾರ , ಜೂಲೈ 9, 2020
27 °C

ಆಟಿಕಾ ಬಾರ್‌ಗೆ ₹5 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟಿಕಾ ಬಾರ್‌ಗೆ ₹5 ಲಕ್ಷ ದಂಡ

ಬೆಂಗಳೂರು: ಅನಧಿಕೃತ ರೂಫ್‌ಟಾಪ್‌ ಬಾರ್‌ಗಳ ವಿರುದ್ಧ ಸಮರ ಸಾರಿರುವ ಬಿಬಿಎಂಪಿ, ಲ್ಯಾವೆಲ್ಲೆ ರಸ್ತೆಯಲ್ಲಿ ‘ಆಟಿಕಾ’ ಬಾರ್ ಅನ್ನು ಮುಚ್ಚುವಂತೆ ಸೂಚಿಸಿದೆ. ಜತೆಗೆ ₹5 ಲಕ್ಷ ದಂಡವನ್ನೂ ವಿಧಿಸಿದೆ.

ಮೇಯರ್‌ ಆರ್‌.ಸಂಪತ್‌ ರಾಜ್‌ ಅವರು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರೊಂದಿಗೆ ಮಂಗಳವಾರ ತಪಾಸಣೆ ನಡೆಸಿದರು.

ಈ ವೇಳೆ ಆಟಿಕಾ ಬಾರ್‌ನಲ್ಲಿ ಹುಕ್ಕಾ ಸೇವನೆ ಮಾಡುತ್ತಿದ್ದುದು ಕಂಡುಬಂತು. ಇದಕ್ಕೆ ಪರವಾನಗಿಯೂ ಇರಲಿಲ್ಲ. ಕಸವೂ ಇತ್ತು. ಅಲ್ಲದೆ, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಮೇಯರ್‌, ದಂಡ ವಿಧಿಸಿದರು.

ಇದೇ ರಸ್ತೆಯಲ್ಲಿರುವ ‘ಲೇಡಿ ಬಾಗಾ’ ಬಾರ್‌ ಅನ್ನು ಮೊದಲ ಹಾಗೂ ಎರಡನೇ ಮಹಡಿಯಲ್ಲಿ ನಡೆಸಲಾಗುತ್ತಿದೆ. ಎರಡನೇ ಮಹಡಿಗೆ ಆರೋಗ್ಯಾಧಿಕಾರಿ ಅಕ್ರಮವಾಗಿ ಪರವಾನಗಿ ನೀಡಿರುವುದು ಕಂಡುಬಂತು. ಅವರ ವಿರುದ್ಧ ದೂರು ದಾಖಲಿಸಲು ಮೇಯರ್‌ ಸೂಚನೆ ನೀಡಿದರು. 

ಈ ಪರವಾನಗಿಯನ್ನು ವಾಪಸ್‌ ಪಡೆದ ಬಳಿಕ ಬಾರ್‌ ಮುಚ್ಚಿಸುವುದಾಗಿ ಸಂಪತ್‌ರಾಜ್‌ ತಿಳಿಸಿದರು. ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ಪೂರ್ವ ವಲಯದ ಜಂಟಿ ಆಯುಕ್ತ ಡಾ.ಅಶೋಕ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.