ಮಂಗಳವಾರ, ಜುಲೈ 14, 2020
26 °C

ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’

ಪಿಟಿಐ Updated:

ಅಕ್ಷರ ಗಾತ್ರ : | |

ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’

ನವದೆಹಲಿ: ತಿಂಗಳ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ₹ 1,000 ದಿಂದ  ₹ 7,500ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪಿಂಚಣಿದಾರರು ‘ಭಿಕ್ಷಾ ಆಂದೋಲನ’ ಆರಂಭಿಸಿದ್ದಾರೆ.

ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ (1995ರ ಕಾರ್ಮಿಕರ ಪಿಂಚಣಿ ಯೋಜನೆ–ಇಪಿಎಸ್‌ 95) ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 10ರ ಒಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆಂದೋನಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದೂ ಸಮಿತಿಯು ಎಚ್ಚರಿಕೆ ನೀಡಿದೆ.

ಸದ್ಯ ತಿಂಗಳ ಪಿಂಚಣಿ ಮೊತ್ತ ₹ 1,000 ಇದೆ. ಕೇಂದ್ರ ಸರ್ಕಾರದ ಬಳಿ ಪಿಂಚಣಿ ನಿಧಿ ₹ 3 ಲಕ್ಷ ಕೋಟಿ ಇದೆ. ಹೀಗಿದ್ದರೂ 60 ಲಕ್ಷ ಪಿಂಚಣಿದಾರರಲ್ಲಿ 40 ಲಕ್ಷ ಪಿಂಚಣಿದಾರರು ಪ್ರತಿ ತಿಂಗಳು  ₹ 1,500ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.