ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರಿಯಾ’ ದೇಶಗಳ ಮಾತುಕತೆ: ‘ಉತ್ತಮ ಸಂಗತಿ’ ಎಂದು ಹೇಳಿ ಶ್ರೇಯ ಪಡೆಯಲು ಯತ್ನಿಸಿದ ಅಮೆರಿಕ

Last Updated 4 ಜನವರಿ 2018, 13:18 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮುಂದಿನ ವಾರ ಉತ್ತರ ಮತ್ತು ದಕ್ಷಿಣ ಕೊರಿಯ ದೇಶಗಳು ಉನ್ನತ ಮಟ್ಟದ ಮಾತುಕತೆ ನಡೆಸಲು ಮುಂದಾಗಿವೆ. ಈ ಬೆಳವಣಿಗೆಯನ್ನು ಒಳ್ಳೆಯ ಸಂಗತಿ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದರ ಶ್ರೇಯ ಪಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಉತ್ತರ ಕೊರಿಯಾ ವಿರುದ್ಧದ ನಮ್ಮ ನಿರ್ಧಾರ ಹಾಗೂ ಬದ್ಧತೆ ದೃಢವಾಗಿರದಿದ್ದರೂ ದಕ್ಷಿಣ ಕೊರಿಯ– ಉತ್ತರ ಕೊರಿಯಾ ಮಾತುಕತೆ ಸಾಧ್ಯವಾಗುತ್ತಿತ್ತು ಎಂದು ಮೂರ್ಖ ತಜ್ಞರು ಅಂದಾಜಿಸುತ್ತಾರೆ. ಇದನ್ನು ಯಾರಾದರೂ ನಂಬುತ್ತಾರೆಯೇ’ ಎಂದು ಟ್ರಂಪ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಎರಡು ದೇಶಗಳ ನಡುವಣ ಈ ಮಾತುಕತೆ ಒಳ್ಳೆಯ ಬೆಳವಣಿಗೆ’ ಎಂದು ಟ್ರಂಪ್‌ ಹೇಳಿದ್ದು, ಈ ಮೂಲಕ ಉತ್ತರ ಕೊರಿಯಾ ವಿರುದ್ಧದ ತಮ್ಮ ನಿರ್ಧಾರವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT