ಬುಧವಾರ, ಜೂಲೈ 8, 2020
23 °C

ಬ್ಯಾಂಕ್‌ ಪುನರ್ಧನ ಒಪ್ಪಿಗೆ ಕೇಳಿದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ಪುನರ್ಧನ ಒಪ್ಪಿಗೆ ಕೇಳಿದ ಕೇಂದ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಪುನರ್ಧನ ಯೋಜನೆಯಡಿ ₹ 80 ಸಾವಿರ ಕೋಟಿ ವೆಚ್ಚ ಮಾಡಲು ಒಪ್ಪಿಗೆ ನೀಡಬೇಕೆಂಬ ಪ್ರಸ್ತಾವವನ್ನು ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿಟ್ಟಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿಯೇ ಈ ಪುನರ್ಧನ ಯೋಜನೆ ಜಾರಿಗೆ ಬರಲಿದೆ. ಬಡ್ಡಿ ಪಾವತಿ ಮತ್ತು ಇತರ ಸಂಗತಿಗಳನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಉದ್ದೇಶಿತ ಪುನರ್ಧನ ಬಾಂಡ್‌ಗಳು  ಶಾಸನಬದ್ಧ ನಗದು ಅನುಪಾತ (ಎಸ್‌ಎಲ್‌ಆರ್‌) ಸ್ಥಾನಮಾನ ಹೊಂದಿರುವುದಿಲ್ಲ ಮತ್ತು ಅವುಗಳ ವಹಿವಾಟನ್ನೂ ನಡೆಸುವಂತಿಲ್ಲ. ಬ್ಯಾಂಕ್‌ಗಳು ತಮ್ಮ ಠೇವಣಿಗಳ ನಿರ್ದಿಷ್ಟ ಮೊತ್ತವನ್ನು ಸರ್ಕಾರಿ ಸಾಲಪತ್ರಗಳಲ್ಲಿ ತೊಡಗಿಸುವುದಕ್ಕೆ ‘ಎಸ್‌ಎಲ್‌ಆರ್‌’ ಎನ್ನುತ್ತಾರೆ.

‘ಎಸ್‌ಎಲ್‌ಆರ್‌’ ಸ್ಥಾನಮಾನ ಹೊಂದಿರುವ ಸಾಲಪತ್ರಗಳನ್ನು ಮಾತ್ರ ಷೇರುಪೇಟೆಗಳಲ್ಲಿ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ.

ಬ್ಯಾಂಕ್‌ ಪುನರ್ಧನದ ಈ ₹ 80 ಸಾವಿರ ಕೋಟಿಗಳ ಹೆಚ್ಚುವರಿ ವೆಚ್ಚವನ್ನು ಸರ್ಕಾರಿ ಸಾಲಪತ್ರ ನೀಡಿಕೆ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.