ಶನಿವಾರ, ಜೂಲೈ 11, 2020
28 °C

ಕಬಡ್ಡಿ: ಸೆಮಿಫೈನಲ್‌ಗೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕರ್ನಾಟಕ ಪುರುಷರ ತಂಡದವರು ರಾಷ್ಟ್ರೀಯ ಸೀನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಗುರು ವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿ ಕರ್ನಾಟಕ 51–30 ಪಾಯಿಂಟ್ಸ್‌ನಿಂದ ಉತ್ತರಾಖಂಡ ತಂಡ ವನ್ನು ಪರಾಭವಗೊಳಿಸಿತು.

ಆರಂಭದಿಂದಲೂ ಆಕ್ರಮಣಕಾರಿ ಆಟ ಆಡಿದ ಕರ್ನಾಟಕ ತಂಡದವರು ಲೀಲಾಜಾಲವಾಗಿ ಎದುರಾಳಿಗಳ ರಕ್ಷಣಾಕೋಟೆಯನ್ನು ಭೇದಿಸಿದರು. ಈ ಮೂಲಕ 33–14ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ಕರ್ನಾಟಕ ತಂಡದ ಸುಖೇಶ್‌ ಹೆಗ್ಡೆ, ಪ್ರಶಾಂತ್‌ ರೈ, ಜೀವಕುಮಾರ್‌, ಜವಾಹರ್‌ ವಿವೇಕ್‌ ಮತ್ತು ನಿತೇಶ್‌ ಉತ್ತಮ ಆಟ ಆಡಿದರು.

ಶುಕ್ರವಾರ ನಡೆಯುವ ನಾಲ್ಕರ ಘಟ್ಟದ ಹೋರಾಟದಲ್ಲಿ ಶಬ್ಬೀರ್‌ ಬಳಗ ಮಹಾರಾಷ್ಟ್ರ ಮತ್ತು ಉತ್ತರ ‍ಪ್ರದೇಶ ತಂಡಗಳ ನಡುವಣ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.