ಹರ್ಯಾಣದ ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್‍‍ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಇದಕ್ಕಾಗಿ ಖರ್ಚು ಮಾಡಿದ್ದು ₹2 ಲಕ್ಷ!

7

ಹರ್ಯಾಣದ ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್‍‍ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಇದಕ್ಕಾಗಿ ಖರ್ಚು ಮಾಡಿದ್ದು ₹2 ಲಕ್ಷ!

Published:
Updated:
ಹರ್ಯಾಣದ ಈ ಗ್ರಾಮದಲ್ಲಿ 20 ಲೌಡ್ ಸ್ಪೀಕರ್‍‍ಗಳಲ್ಲಿ ಮೊಳಗುತ್ತದೆ ರಾಷ್ಟ್ರಗೀತೆ; ಇದಕ್ಕಾಗಿ ಖರ್ಚು ಮಾಡಿದ್ದು ₹2 ಲಕ್ಷ!

ಭನಕ್‍ಪುರ್: ಫರಿದಾಬಾದ್ ಜಿಲ್ಲೆಯಲ್ಲಿ ಜಾಟ್ ಸಮುದಾಯ ಪ್ರಭುತ್ವವಿರುವ ಭನಕ್‍ಪುರ್ ಗ್ರಾಮದಲ್ಲಿ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆ ಮೊಳಗುತ್ತದೆ. ಸುಮಾರು 5000 ಜನರಿರುವ ಈ ಗ್ರಾಮದಲ್ಲಿ ರಾಷ್ಟ್ರಗೀತೆ ಹಾಡುವುದಕ್ಕಾಗಿ 20 ಲೌಡ್‍ ಸ್ಪೀಕರ್‍‍ಗಳನ್ನು ಇರಿಸಲಾಗಿದೆ. ಬೆಳಗ್ಗೆ ಈ ಲೌಡ್ ಸ್ಪೀಕರ್‍‍ನಲ್ಲಿ ರಾಷ್ಟ್ರಗೀತೆ ಮೊಳಗುವಾಗ ಇಲ್ಲಿನ ಗ್ರಾಮಸ್ಥರು ರಾಷ್ಟ್ರಗೀತೆ ಹಾಡುತ್ತಾರೆ. ಹರ್ಯಾಣದಲ್ಲಿ ಇದೇ ಮೊದಲ ಬಾರಿಗೆ ಗ್ರಾಮವೊಂದು ರಾಷ್ಟ್ರಗೀತೆ ಹಾಡಲು ಲೌಡ್ ಸ್ಪೀಕರ್ ಸೌಲಭ್ಯ ಹೊಂದಿದ್ದು,  ಭಾರತದಲ್ಲಿ ಈ ರೀತಿ ಸೌಲಭ್ಯ ಹೊಂದಿರುವ ಎರಡನೇ ಗ್ರಾಮವಾಗಿದೆ ಭನಕ್‍ಪುರ್.

ಇಲ್ಲಿನ ಗ್ರಾಮದ ಸರ್‍‍ಪಂಚ್ ಸಚಿನ್ ಮಡೊಟಿಯಾ ಅವರು ಗುರುವಾರ ಈ ವ್ಯವಸ್ಥೆಯನ್ನು ಗ್ರಾಮದಲ್ಲಿ ಚಾಲನೆಗೆ ತಂದಿದ್ದಾರೆ. ಆರ್‍ಎಸ್‍ಎಸ್ ಸ್ವಯಂ ಸೇವಕರೂ ಆಗಿರುವ 24 ರ ಹರೆಯದ ಸಚಿನ್, ಗ್ರಾಮದಲ್ಲಿ ಲೌಡ್ ಸ್ಪೀಕರ್‍ ಇರಿಸುವುದಕ್ಕಾಗಿ ಗ್ರಾಮ ಪಂಚಾಯತ್ ₹2.97 ಲಕ್ಷ ಹಣ ವ್ಯಯಿಸಿದೆ. ಇದರ ಕಂಟ್ರೋಲ್ ರೂಂ ಸಚಿನ್ ಅವರ ಮನೆಯಲ್ಲೇ ಇದೆ. ತೆಲಂಗಾಣದ ಜಮ್ಮಿಕುಂಟ ಎಂಬ ಗ್ರಾಮದಲ್ಲಿ ಗ್ರಾಮಸ್ಥರು ಜತೆಯಾಗಿ ರಾಷ್ಟ್ರಗೀತೆ ಹಾಡುತ್ತಾರೆ. ಅಲ್ಲಿಂದ ಪ್ರೇರಣೆ ಪಡೆದು ತಮ್ಮ ಗ್ರಾಮದಲ್ಲಿ ಈ ವ್ಯವಸ್ಥೆ ಕಲ್ಪಿಸಿರುವುದಾಗಿ ಹೇಳಿದ್ದಾರೆ.

ಇನ್ನು ಮುಂದೆ  ಗ್ರಾಮಸ್ಥರು ದಿನಕ್ಕೆ ಎರಡು ಬಾರಿ ರಾಷ್ಟ್ರಗೀತೆ ಹಾಡುವಂತೆ ಮಾಡಾಲಾಗುವುದು. ಇದೀಗ ಪ್ರತಿದಿನ ಒಂದು ಬಾರಿ ಮಾತ್ರ ಹಾಡಲಾಗುತ್ತದೆ. ಈ ಗ್ರಾಮದಲ್ಲಿ  22 ಸಿಸಿಟಿವಿಗಳನ್ನೂ ಸ್ಥಾಪಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜತೆ ಮಾತನಾಡಿದ ಸಚಿನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry