ನೀರಾವರಿ ಯೋಜನೆಗಳಿಗೆ ಸರ್ಕಾರದ ಆದ್ಯತೆ

7

ನೀರಾವರಿ ಯೋಜನೆಗಳಿಗೆ ಸರ್ಕಾರದ ಆದ್ಯತೆ

Published:
Updated:

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿದರು. ಗೌಡಗೆರೆಯಲ್ಲಿ ಈಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು, ನುಗ್ಗೇಹಳ್ಳಿ, ಕಾಚೇನಹಳ್ಳಿ, ಹಿರೀಸಾವೆ–ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ’ ಎಂದು ಹೇಳಿದರು.

ಕಲ್ಲೇಸೋಮನಹಳ್ಳಿ ನೀರಾವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ನೀರಾವರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರಕ್ಕೆ ಬದ್ಧತೆ ಇದೆ ಎಂದು ಹೇಳಿದರು. ಮುಖಂಡ ಎಂ.ಶಂಕರ್‌ ಅವರು, ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲಮನ್ನಾ ಮೂಲಕ ರೈತರ ನೆರವಿಗೆ ಮುಖ್ಯಮಂತ್ರಿ ಧಾವಿಸಿದ್ದಾರೆ. ಕಾರ್ಯಕರ್ತರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮುಖಂಡರಾದ ಕಬ್ಬಳಿ ರಂಗೇಗೌಡ, ಎಚ್‌.ಎಸ್‌.ವಿಜಯಕುಮಾರ್‌, ವಿ.ಜಿ. ಲಲಿತಮ್ಮ, ಸಿ.ಎಸ್‌.ಜಯರಾಂ, ಜೆ.ಎಂ.ರಾಮಚಂದ್ರ, ಎಂ.ಎ.ರಂಗಸ್ವಾಮಿ, ಕೆ.ಎಲ್‌.ಸುರೇಶ್‌, ಮಂಜುಳಾ ಶಂಕರ್‌, ಸೌಮ್ಯಾ ಚಂದ್ರೇಗೌಡ, ಭೈರೇಗೌಡ, ಆರ್‌.ರಂಗೇಗೌಡ, ಡಿ.ಸಿ.ಮಂಜೇಗೌಡ, ಮಂಜುನಾಥ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry