‘ಆಧಾರ್‌’ನಿಂದ ಉಪನ್ಯಾಸಕರ ಅಕ್ರಮ ಪತ್ತೆ

7

‘ಆಧಾರ್‌’ನಿಂದ ಉಪನ್ಯಾಸಕರ ಅಕ್ರಮ ಪತ್ತೆ

Published:
Updated:
‘ಆಧಾರ್‌’ನಿಂದ ಉಪನ್ಯಾಸಕರ ಅಕ್ರಮ ಪತ್ತೆ

ನವದೆಹಲಿ: ದೇಶದ ಉನ್ನತ ಶಿಕ್ಷಣ ಕ್ಷೇತ್ರದ ದೊಡ್ಡ ಅಕ್ರಮವೊಂದನ್ನು ಆಧಾರ್‌ ಜೋಡಣೆ ಅನಿರೀಕ್ಷಿತ ರೀತಿಯಲ್ಲಿ ಬಯಲಿಗೆಳೆದಿದೆ.

ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ 80,000 ಉಪನ್ಯಾಸಕರು ಮತ್ತು ಅಧ್ಯಾಪಕರು ಒಂದಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಆಶ್ಚರ್ಯಕರ ಪ್ರಕರಣ ಆಧಾರ್ ಜೋಡಣೆಯಿಂದಾಗಿ ಬೆಳಕಿಗೆ ಬಂದಿದೆ. ಇದು ಯುಜಿಸಿಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿರುವ ಸರ್ಕಾರ, ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನೂ ಅನೇಕ ರಾಜ್ಯಗಳಲ್ಲಿ ಈ ಅಕ್ರಮ ನಡೆದಿರುವುದನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿಯೇ ಅತಿ ಹೆಚ್ಚು (ಶೇ 90) ಅಕ್ರಮ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ತನಿಖೆಯ ನಂತರ ಇಂತಹ ಚಟುವಟಿಕೆಯಲ್ಲಿ ತೊಡಗಿರುವ ಅಧ್ಯಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳ ಒಟ್ಟು 15 ಲಕ್ಷ ಬೋಧಕರ ಪೈಕಿ ಇದುವರೆಗೂ 12.50 ಲಕ್ಷ ಸಿಬ್ಬಂದಿ ಆಧಾರ್‌ ಸಂಖ್ಯೆ ನೀಡಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry