ಬುಧವಾರ, ಜೂಲೈ 8, 2020
22 °C

‘ಶಾಸಕರು ವಿದೇಶದಲ್ಲಿದ್ದಾರೆ...!’

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ರಾಯಚೂರಿನ ರಿಪೋರ್ಟರ್ಸ್‌ ಗಿಲ್ಡ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್‌ ಪಕ್ಷದ ಮುಖಂಡ ಟಿ.ಎ.ಶರವಣ ಅವರಿಗೆ, ‘ರಾಯಚೂರು ನಗರ ಕ್ಷೇತ್ರದ ಜೆಡಿಎಸ್‌ ಶಾಸಕ ಡಾ.ಶಿವರಾಜ ಪಾಟೀಲ ಅವರು ಏಕೆ ನಿಮ್ಮ ಜೊತೆ ಬಂದಿಲ್ಲ’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಎಸೆದರು. ಶರವಣ ಅವರು ತಡಮಾಡದೆ, ‘ಶಾಸಕರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ’ ಎಂದು ಹೇಳಿದಾಗ

ಪತ್ರಕರ್ತರೆಲ್ಲರೂ ನಗುವಂತಾಯಿತು.

ರಿಪೋರ್ಟರ್ಸ್‌ ಗಿಲ್ಡ್‌ನ ಪಕ್ಕದಲ್ಲೇ ಇರುವ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಶಾಸಕ ಶಿವರಾಜ ಪಾಟೀಲ ಪಾಲ್ಗೊಂಡಿರುವ ವಿಚಾರ ಎಲ್ಲರಿಗೂ ತಿಳಿದಿತ್ತು. ಇದುವೇ ಮಾಧ್ಯಮದವರ ನಗುವಿಗೆ ಕಾರಣವಾಗಿತ್ತು. ಅಷ್ಟರಲ್ಲೇ ಜೆಡಿಎಸ್‌ನ ಕೆಲವು ಕಾರ್ಯಕರ್ತರು, ‘ಪಕ್ಷ ಏರ್ಪಡಿಸುವ ಯಾವುದೇ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಳ್ಳುತ್ತಿಲ್ಲ’ ಎಂಬ ವಿಚಾರವನ್ನು ಶರವಣ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಮುಜುಗರವಾದರೂ ಸಾವರಿಸಿಕೊಂಡ ಶರವಣ, ‘ಎರಡು ದಿನಗಳ ಹಿಂದೆ ವಿಚಾರಿಸಿದಾಗ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಲಾಗಿತ್ತು... ಭಿನ್ನಾಭಿಪ್ರಾಯಗಳು ಎಲ್ಲ ಪಕ್ಷಗಳಲ್ಲೂ ಇರುತ್ತವೆ. ಸಂಕ್ರಮಣದ ಬಳಿಕ ಎಲ್ಲವನ್ನು ಸರಿಪಡಿಸುತ್ತೇವೆ’ ಎಂದು ತೇಪೆಹಚ್ಚಿದರು. v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.