ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರ ಬಂಧನ

7

ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರ ಬಂಧನ

Published:
Updated:

ನವದೆಹಲಿ: ಇಲ್ಲಿನ ಶಾಲಿಮಾರ್‌ ಬಾಗ್‌ ಪ್ರದೇಶದಲ್ಲಿ ಡಿಸೆಂಬರ್‌ 16ರಂದು ಬಾಲಕಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಮೂವರನ್ನು ಬಂಧಿಸಿದ್ದಾರೆ.

ಶಿವಪ್ರಸಾದ್ ಅಲಿಯಾಸ್ ಬಬುವಾ (33), ಅರುಣ್‌ ಯಾದವ್‌ (36) ಮತ್ತು ಕಮಲೇಶ್ ಅಲಿಯಾಸ್ ಬಾಬಾ (28) ಬಂಧಿತರು.

ಮನೆಕೆಲಸ ಮಾಡಿಕೊಂಡಿದ್ದ ಬಾಲಕಿ, ಹೈದರ್‌ಪುರದ ಉದ್ಯಾನವೊಂದರಲ್ಲಿ ತನ್ನ ಗೆಳೆಯನೊಂದಿಗೆ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಈ ಮೂವರು ಆರೋಪಿಗಳು, ಆಕೆಯ ಗೆಳೆಯನ ಜತೆ ಜಗಳಕ್ಕಿಳಿದು, ಅವನಿಗೆ ಹೊಡೆಯಲಾರಂಭಿಸಿದರು. ಇದನ್ನು ತಡೆಯಲು ಪ್ರಯತ್ನಿಸಿದ ಬಾಲಕಿಯನ್ನು ಹೊತ್ತೊಯ್ದು, ಅತ್ಯಾಚಾರ ಎಸಗಿದ್ದರು. ಅಲ್ಲದೆ, ಯಾರಿಗೂ ಈ ವಿಷಯ ತಿಳಿಸದಂತೆ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸ್‌ ಅಧಿಕಾರಿ ಅಸ್ಲಂ ಖಾನ್‌ ತಿಳಿಸಿದ್ದಾರೆ.

ನಿರ್ಭಯಾ ಪ್ರಕರಣದ ಐದನೇ ವರ್ಷಾಚರಣೆ ದಿನವೇ ಈ ಪ್ರಕರಣ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry